2017ರ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತ 137ನೇ ಸ್ಥಾನ ಪಡೆದಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಆಸ್ಪ್ರೇಲಿಯಾ ಮೂಲದ ಅರ್ಥಶಾಸ್ತ್ರ ಮತ್ತು ಶಾಂತಿ ಸಂಸ್ಥೆ ತಯಾರಿಸಿರುವ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಈ ಅಂಶಗಳು ವ್ಯಕ್ತವಾಗಿವೆ.

ನವದೆಹಲಿ: 2017ರ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತ 137ನೇ ಸ್ಥಾನ ಪಡೆದಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ.

ಆಸ್ಪ್ರೇಲಿಯಾ ಮೂಲದ ಅರ್ಥಶಾಸ್ತ್ರ ಮತ್ತು ಶಾಂತಿ ಸಂಸ್ಥೆ ತಯಾರಿಸಿರುವ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಈ ಅಂಶಗಳು ವ್ಯಕ್ತವಾಗಿವೆ.

ದಕ್ಷಿಣ ಏಷ್ಯಾದಲ್ಲಿ ಭೂತಾನ್‌ ಅತ್ಯಂತ ಶಾಂತಿಯುತ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅದು ಸೂಚ್ಯಂಕ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದೆ.

ದಕ್ಷಿಣ ಏಷ್ಯಾದಲ್ಲಿ ನಂತರದ ಸ್ಥಾನದಲ್ಲಿ ಶ್ರೀಲಂಕಾ (80), ಬಾಂಗ್ಲಾದೇಶ (84) ಪಾಕಿಸ್ತಾನ (152) ಮತ್ತು ಆಷ್ಘಾನಿಸ್ತಾನ (162) ಗುರುತಿಸಲ್ಪಟ್ಟಿವೆ.