ಭಾರತ ಧಾರ್ಮಿಕ ಅಲ್ಪ ಸಂಖ್ಯಾತರ ಸ್ವರ್ಗಅಲ್ಪಸಂಖ್ಯಾತರ ಸುರಕ್ಷಿತ ದೇಶ ಭಾರತಹಿಂದೂ ಅಮೆರಿಕನ್ ಫೌಂಡೇಶನ್ ವರದಿ  ಶಾಂತಿ, ಸಹಬಾಳ್ವೆಯೇ ಭಾರತದ ಹಿರಿಮೆಭಾರತದಲ್ಲಿ ಎಲ್ಲರಿಗೂ ಸಮಾನ ಅವಕಾಶ

ವಾಷಿಂಗ್ಟನ್(ಜು.29): ತನ್ನ ಧಾರ್ಮಿಕ ಅಲ್ಪಸಂಖ್ಯಾತ ಜನಸಂಖ್ಯೆಗೆ ಭಾರತ ಸರ್ಕಾರ ಸಾಕಷ್ಟು ಭದ್ರತೆ ನೀಡುತ್ತಿದ್ದು, ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಭಾರತ ದೇಶದ ಸ್ಥಿರತೆ ಬಲವಾಗಿದೆ ಎಂದು ವರದಿಯೊಂದು ಹೇಳಿದೆ. ಅಮೆರಿಕ ಮೂಲದ ಹಿಂದೂ ಅಮೆರಿಕನ್ ಫೌಂಡೇಷನ್ ಈ ವರದಿ ನೀಡಿದ್ದು, ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಭಾರತದಷ್ಟು ಸುರಕ್ಷಿತ ದೇಶ ಮತ್ತೊಂದಿಲ್ಲ ಎಂದು ಉಲ್ಲೇಖಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಾಗತಿಕ ಮಟ್ಟದ ನಾಲ್ಕು ಧರ್ಮಗಳ ಜನ್ಮ ಸ್ಥಳವಾದ ಭಾರತ ಶತಮಾನಗಳ ಕಾಲ ಸಾಕಷ್ಟು ಧಾರ್ಮಿಕ, ಭಾಷಾ ಸಹಿಷ್ಣುತೆ ಬೆಳೆಸಿಕೊಂಡು ಬಂದಿದೆ. ಅಲ್ಲದೆ ಹಿಂಸಾಚಾರದಿಂದ ತಪ್ಪಿಸಿಕೊಂಡು ಬಂದವರಿಗೆ ಆಶ್ರಯವನ್ನೂ ನೀಡುತ್ತಾ ಬರುವ ಮೂಲಕ ಆದರಣನೀಯ ರಾಷ್ಟ್ರವಾಗಿದೆ. ಸರ್ಕಾರ, ಮಿಲಿಟರಿ, ನ್ಯಾಯಾಂಗದ ಎಲ್ಲ ಸ್ಥರದಲ್ಲೂ ಯಾವುದೇ ತಾರತಮ್ಯವಿಲ್ಲದೇ ಅಲ್ಪಸಂಖ್ಯಾತರಿಗೂ ಭಾರತ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ವರದಿ ತಿಳಿಸಿದೆ.

ಮುಸ್ಲಿಮರು ಹಾಗು ಕ್ರಿಶ್ಚಿಯನ್ನರಿಗೆ ತಮ್ಮದೇ ಧರ್ಮಕ್ಕನುಗುಣವಾದ ಕಾನೂನಿಗೂ ಅವಕಾಶ ಮಾಡಿಕೊಟ್ಟಿದ್ದು, ಭಾರತ ಇಡೀ ಜಗತ್ತೇ ವಿಸ್ಮಯವಾಗಿ ನೋಡುವ ರೀತಿಯಲ್ಲಿ ತನ್ನ ಅಲ್ಪಸಂಖ್ಯಾತರನ್ನು ನೋಡಿಕೊಳ್ಳುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆಗಾಗ ಸಂಭವಿಸಿರುವ ಧಾರ್ಮಿಕ ಗಲಭೆಗಳಿಗೆ ರಾಜಕೀಯ, ಐತಿಹಾಸಿಕ ಹಾಗೂ ಧಾರ್ಮಿಕ ಕಾರಣಗಳಿದ್ದರೂ, ಇತ್ತೀಚಿನ ದಿನಗಳಲ್ಲಿ ಇವೆಲ್ಲಾ ಸಾಕಷ್ಟು ಕಡಿಮೆಯಾಗಿವೆ. ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ. ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆ, ನಕ್ಸಲ್‌ ಭಯೋತ್ಪಾದನೆಯನ್ನು ದಮನ ಮಾಡಿ ಇನ್ನಷ್ಟು ಸ್ಥಿರತೆ ತರುವ ನಿಟ್ಟಿನಲ್ಲಿ ಭಾರತಕ್ಕೆ ಮುಂದಿನ ದಿನಗಳಲ್ಲಿ ಅಮೆರಿಕ ಇನ್ನಷ್ಟು ಬೆಂಬಲ ನೀಡಬೇಕಿದೆ ಎಂದು ಪ್ರತಿಷ್ಠಾನ ಪ್ರತಿಪಾದಿಸಿದೆ.