ಕೇಂದ್ರ ಸರ್ಕಾರ 2007ರಲ್ಲೇ ಒಪ್ಪಿಗೆ ನೀಡಿದ್ದರೂ, ಅಣ್ವಸ್ತ್ರ ಸಬ್‌'ಮರೀನ್‌'ಗಳನ್ನು ಖರೀದಿಸುವ ಪ್ರಕ್ರಿಯೆ ಮೂಲೆಗುಂಪಾಗಿತ್ತು. 10 ವರ್ಷಗಳ ಬಳಿಕ ಅದಕ್ಕೆ ಉತ್ತೇಜನ ಸಿಕ್ಕಿದ್ದು, 70 ಸಾವಿರ ಕೋಟಿ ರು. ವೆಚ್ಚದಲ್ಲಿ ಆರು ಅತ್ಯಾಧುನಿಕ, ಶತ್ರುಪಡೆಗಳ ಕಣ್ತಪ್ಪಿಸಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಸಬ್ ಮರೀನ್‌'ಗಳನ್ನು ವಿದೇಶಿ ಕಂಪನಿಗಳ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲು ಮುಂದಾಗಿದೆ.

ನವದೆಹಲಿ: ಸಾಂಪ್ರದಾಯಿಕ ಶತ್ರು ಪಾಕಿಸ್ತಾನ ಹಾಗೂ ಪದೇಪದೇ ತಗಾದೆ ತೆಗೆಯುವ ಚೀನಾ ದೇಶಗಳನ್ನು ಅಕ್ಕಪಕ್ಕ ಹೊಂದಿರುವ ಭಾರತ, ಆ ಎರಡೂ ದೇಶಗಳ ಮೇಲೆ ಒಮ್ಮೆಲೆ ದಾಳಿ ನಡೆಸುವ ಸಾಮರ್ಥ್ಯ ಗಳಿಸುವ ಸಲುವಾಗಿ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆಗಳನ್ನು ಹೊಂದಲು ಮುಂದಾಗಿದೆ. ಸಮುದ್ರದಾಳದಲ್ಲಿ ಬಳಸುವ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ಭಾರತ ನಡೆಸುತ್ತಿರುವ ಬೃಹತ್ ಖರೀದಿ ವ್ಯವಹಾರ ಇದಾಗಿದೆ. ಭಾರತದ ಪಾಲಿಗೆ ‘ಸಮುದ್ರ ಶಸ್ತ್ರಾಸ್ತ್ರ ಖರೀದಿ ವ್ಯವಹಾರದ ಮಹಾತಾಯಿ’ ಎಂದು ಇದನ್ನು ಬಣ್ಣಿಸಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಸರ್ಕಾರ 2007ರಲ್ಲೇ ಒಪ್ಪಿಗೆ ನೀಡಿದ್ದರೂ, ಅಣ್ವಸ್ತ್ರ ಸಬ್‌'ಮರೀನ್‌'ಗಳನ್ನು ಖರೀದಿಸುವ ಪ್ರಕ್ರಿಯೆ ಮೂಲೆಗುಂಪಾಗಿತ್ತು. 10 ವರ್ಷಗಳ ಬಳಿಕ ಅದಕ್ಕೆ ಉತ್ತೇಜನ ಸಿಕ್ಕಿದ್ದು, 70 ಸಾವಿರ ಕೋಟಿ ರು. ವೆಚ್ಚದಲ್ಲಿ ಆರು ಅತ್ಯಾಧುನಿಕ, ಶತ್ರುಪಡೆಗಳ ಕಣ್ತಪ್ಪಿಸಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಸಬ್ ಮರೀನ್‌'ಗಳನ್ನು ವಿದೇಶಿ ಕಂಪನಿಗಳ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲು ಮುಂದಾಗಿದೆ.

ಈ ಸಂಬಂಧ ಸೆ.15ರೊಳಗೆ ಮಾಹಿತಿ ಕೋರಿ ಫ್ರಾನ್ಸ್, ಜರ್ಮನಿ, ರಷ್ಯಾ, ಸ್ವೀಡನ್, ಸ್ಪೇನ್ ಹಾಗೂ ಜಪಾನ್‌ಗಳಿಗೆ ಪತ್ರ ರವಾನಿಸಿದೆ. ಆ ಆರು ದೇಶಗಳಿಂದ ಪ್ರತಿಕ್ರಿಯೆ ಬಂದ ಬಳಿಕ ಬೇಡಿಕೆ ಇಡಲಿದೆ.

epaperkannadaprabha.com