ಇಸ್ಲಾಮಾಬಾದ್‌[ಜು.02]: ದೂತಾವಾಸ ಬಳಕೆ ಒಪ್ಪಂದದ ಅಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೋಮವಾರ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿವೆ.

ಈ ಪ್ರಕಾರ 52 ಮೀನುಗಾರರು ಮತ್ತು 209 ನಾಗರಿಕರು ಸೇರಿದಂತೆ 261 ಭಾರತೀಯರು ಜೈಲು ವಾಸ ಅನುಭವಿಸುತ್ತಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ತಿಳಿಸಿದೆ.

ಅದೇ ರೀತಿ 99 ಮೀನುಗಾರರು ಹಾಗೂ 256 ಪಾಕಿಸ್ತಾನದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಭಾರತ ತಿಳಿಸಿದೆ.

ಇದೇ ವೇಳೆ ಭಾರತೀಯ ಕೈದಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಮತ್ತು ಆದಷ್ಟುಶೀಘ್ರ ಬಿಡುಗಡೆ ಮಾಡುವಂತೆ ಭಾರತ ಕೋರಿಕೆ ಸಲ್ಲಿಸಿದೆ.