ಕಲಬುರಗಿ(ಅ.5): ಭಾರತ ಮತ್ತು ಪಾಕಿಸ್ಥಾನದ ನಡುವೆ ಯುದ್ಧ ನಡೆಯುವುದು ಖಚಿತ.. ಎರಡೂ ಕಡೆ ಅಪಾರ ಸಾವು ನೋವು ಆಗುತ್ತದೆ.. ಅಧರ್ಮದಿಂದ ನಡೆಯುತ್ತಿರುವ ದೇಶ ನಾಶವಾಗಿ ಹೋಗುತ್ತದೆ ಎಂದು ಕಲಬುರಗಿ ಜಿಲ್ಲೆಯ ನಡೆದಾಡುವ ದೇವರೆಂದೇ ಗುರುತಿಸಿಕೊಂಡಿರುವ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮ ಭವಿಷ್ಯ ನುಡಿದಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶದ ಗಡಿಯಲ್ಲಿರುವ ಯಾನಾಗುಂದಿ ಬೆಟ್ಟದಲ್ಲಿನ ಗುಹೆಯಲ್ಲಿ 12 ನೇ ವರ್ಷದಿಂದ ವಾಸವಾಗಿರುವ ಮಾತೆ ಮಾಣಿಕೇಶ್ವರಿ ಅನ್ನ ಆಹಾರವಿಲ್ಲದೇ ಕೇವಲ ಹಾಲು ಹಣ್ಣಿನ ಮೂಲಕ ಬದುಕಿ ವಿಸ್ಮಯ ಮೂಡಿಸಿದ ಮಾತೆ.. ವರ್ಷಕ್ಕೆ ಎರಡು ಬಾರಿ ಮಾತ್ರ ಭಕ್ತರಿಗೆ ದರ್ಶನ ಕೊಡುವ ಮಾತೆ ಮಾಣಿಕೇಶ್ವರಿ ಅಮ್ಮ ಇಂದು ಯಾನಾಗುಂದಿಯ ತಮ್ಮ ಗುಹೆಯ ಬಳಿ ಭವಿಷ್ಯ ನುಡಿದ್ದಾರೆ.