2047 ರಲ್ಲಿ ಭಾರತ ಮತ್ತೆ ಇಬ್ಭಾಗವಾಗುತ್ತಂತೆ! ವಿಧ್ವಂಸಕ ಶಕ್ತಿಗಳ ಜನಸಂಖ್ಯೆಯಲ್ಲಿ ಹೆಚ್ಚಳ! ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ! ಮತ್ತೊಮ್ಮೆ ಧರ್ಮದ ಆಧಾರದಲ್ಲಿ ಭಾರತ ಇಬ್ಭಾಗ! ಸಚಿವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕೇಂದ್ರ 

ನವದೆಹಲಿ(ಸೆ.17): 2047 ರ ವೇಳೆಗೆ ಭಾರತ ಮತ್ತೆ ಇಬ್ಭಾಗವಾಗಲಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

1947 ರಲ್ಲಿ ಭಾರತ ಧಾರ್ಮಿಕ ಆಧಾರದಲ್ಲಿ ಇಬ್ಭಾಗಗೊಂಡಿತ್ತು, 72 ವರ್ಷಗಳಲ್ಲಿ ದೇಶದ ಜನಸಂಖ್ಯೆ 33 ಕೋಟಿಯಿಂದ 135.7 ಕೋಟಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ 2047 ರಲ್ಲಿ ಭಾರತ ಮತ್ತೆ ಇಬ್ಭಾಗವಾಗಲಿದೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಸಮುದಯವನ್ನು ಹೆಸರಿಸದೇ ಇಂತಹ ಆಘಾತಕಾರಿ ಹೇಳಿಕೆ ನೀಡಿರುವ ಕೇಂದ್ರ ಸಚಿವ, ವಿಧ್ವಂಸಕ ಶಕ್ತಿಗಳ ಜನಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಭಯಾನಕವಾಗಿದೆ ಎಂದು ಟ್ವಿಟರ್ ನಲ್ಲಿ ಬರೆದಿದ್ದಾರೆ.

ಜಮ್ಮು-ಕಾಶ್ಮೀರದ ಸ್ಥಳೀಯ ನಿವಾಸಿಗಳಿಗೆ ವಿಶೇಷ ಸೌಲಭ್ಯ, ಹಕ್ಕುಗಳನ್ನು ನೀಡುವ ಆರ್ಟಿಕಲ್ 35ಎ ಬಗ್ಗೆಯೂ ಉಲ್ಲೇಖಿಸಿರುವ ಕೇಂದ್ರ ಸಚಿವರು, 1947 ರಲ್ಲಿ ಭಾರತ ಧಾರ್ಮಿಕ ಆಧಾರದಲ್ಲಿ ಇಬ್ಭಾಗವಾಯಿತು. 2047 ರಲ್ಲಿ ಇಂತಹದ್ದೇ ಘಟನೆ ಮತ್ತೊಮ್ಮೆ ನಡೆಯಲಿದೆ, ಮುಂದೆ ಭಾರತಕ್ಕೆ ಬರುವ ಸ್ಥಿತಿಯನ್ನು ಹೇಳುವುದಕ್ಕೂ ಸಾಧ್ಯವಿಲ್ಲ ಎಂದು ಗಿರಿರಾಜ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.

Scroll to load tweet…

ಇನ್ನು ಗಿರಿರಾಜ್ ಸಿಂಗ್ ಹೇಳಿಕೆ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಸಚಿವ ಸ್ಥಾನದಲ್ಲಿದ್ದು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವ ಗಿರಿರಾಜ್ ಸಿಂಗ್ ವಿರುದ್ಧ ಕಠಿಣ ಕ್ರಮಕ್ಕೆ ಪ್ರತಿಪಕ್ಷಗಳು ಆಗ್ರಹಿಸಿವೆ. ಇದೇ ವೇಳೆ ಗಿರಿರಾಜ್ ಸಿಂಗ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಬಿಜೆಪಿ, ಇದು ಸಚಿವರ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದೆ.