‘‘ಯುವಕರು ದೇಶದ ಆಸ್ತಿಯಿದ್ದಂತೆ. ಆದರೆ, ಬಹುತೇಕ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ’’
ಚಿಂದ್ವಾರ (ಮ.ಪ್ರ)(ಡಿ.14): ‘‘ದೇಶದ ಯುವಕರು ನಿರುದ್ಯೋಗಿಗಳಾಗಿ ಮುಂದುವರಿದರೆ ‘ಅಶಾಂತಿ ಹಾಗೂ ಹತಾಶೆ’ ಹೆಚ್ಚಾಗಲಿದೆ. ಆದ್ದರಿಂದ ಯುವಕರಿಗೆ ಕೌಶಲಯುತ ಕೆಲಸಗಳನ್ನು ಕಲಿಸುವಲ್ಲಿ ಗಮನ ನೀಡಬೇಕು,’’ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ. ಮಧ್ಯಪ್ರದೇಶದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‘ಯುವಕರು ದೇಶದ ಆಸ್ತಿಯಿದ್ದಂತೆ. ಆದರೆ, ಬಹುತೇಕ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ’’ ಎಂದು ವಿಷಾದಿಸಿದ್ದಾರೆ. ಭಾರತದಲ್ಲಿ ಅರ್ಧದಷ್ಟು ಮಂದಿ 25 ವರ್ಷದೊಳಗಿನವರು. ಹೀಗಾಗಿ, ಮುಂದಿನ ದಿನಗಳಲ್ಲಿ ದೇಶ ಬಹುದೊಡ್ಡ ಸವಾಲನ್ನು ಎದುರಿಸಲಿದೆ,’’ ಎಂದೂ ಎಚ್ಚರಿಸಿದ್ದಾರೆ.
