ಮುಂದಿನ 10 ವರ್ಷದಲ್ಲಿ ಭಾರತವು ಜಪಾನ್ ಹಾಗೂ ಜರ್ಮನಿ ಹಿಂದಿಕ್ಕಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊ ಮ್ಮುವ ನಿರೀಕ್ಷೆಯಿದೆ. ಆದರೆ ಇದಕ್ಕಾಗಿ ಭಾರತ ಸಾಮಾಜಿಕ ವಲಯದ ಸುಧಾರಣೆಗೆ ಆದ್ಯತೆ ನೀಡಬೇಕಿದೆ ಎಂದು ಬ್ರಿಟನ್‌ನ ಬ್ಯಾಂಕಿಂಗ್ ಕಂಪನಿಯಾದ ಎಚ್ ಎಸ್‌ಬಿಸಿ ಹೇಳಿದೆ.

ಮುಂಬೈ(ಸೆ.18): ಮುಂದಿನ 10 ವರ್ಷದಲ್ಲಿ ಭಾರತವು ಜಪಾನ್ ಹಾಗೂ ಜರ್ಮನಿ ಹಿಂದಿಕ್ಕಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊ ಮ್ಮುವ ನಿರೀಕ್ಷೆಯಿದೆ. ಆದರೆ ಇದಕ್ಕಾಗಿ ಭಾರತ ಸಾಮಾಜಿಕ ವಲಯದ ಸುಧಾರಣೆಗೆ ಆದ್ಯತೆ ನೀಡಬೇಕಿದೆ ಎಂದು ಬ್ರಿಟನ್‌ನ ಬ್ಯಾಂಕಿಂಗ್ ಕಂಪನಿಯಾದ ಎಚ್ ಎಸ್‌ಬಿಸಿ ಹೇಳಿದೆ.

 ಸದ್ಯಕ್ಕೆ ಶಿಕ್ಷಣ, ಆರೋಗ್ಯದಂಥ ಸಾಮಾಜಿಕ ವಲಯಗಳಲ್ಲಿ ಭಾರತ ಅನುಸರಿಸುತ್ತಿರುವ ಸು‘ಾರಣಾ ಕ್ರಮ ಹಾಗೂ ಬಂಡವಾಳದ ಹರಿವು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ. 2028ರಲ್ಲಿ ಭಾರತ 7 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುವ ನಿರೀಕ್ಷೆಯಿದೆ. ಇದಕ್ಕೆ ಹೋಲಿಸಿದರೆ ಜರ್ಮನಿ 6 ಲಕ್ಷ ಕೋಟಿ ಡಾಲರ್ ಹಾಗೂ ಜಪಾನ್ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಲಿದೆ ಎಂದು ಅದು ಅಂದಾಜಿಸಿದೆ.

ಪ್ರಸಕ್ತ ಭಾರತದ ಜಿಡಿಪಿ (2016-17) 2.3 ಲಕ್ಷ ಕೋಟಿ ಡಾಲರ್ ಆಗಿದೆ. ಜಾಗತಿಕ ರ್ಯಾಂಕಿಂಗ್‌ನಲ್ಲಿ ಭಾರತಕ್ಕೆ 5ನೇ ಸ್ಥಾನ ಇದೆ. ಇದೇ ವೇಳೆ ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿರುವ ಅದು, ಇ-ಕಾಮರ್ಸ್‌ನಿಂದ 12 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಇದು ಉದ್ಯೋಗ ಅಗತ್ಯ ಇರುವ 24 ದಶಲಕ್ಷದ ಅರ್ಧದಷ್ಟು ಎಂದು ಎಚ್‌ಎಸ್‌ಬಿಸಿ ಹೇಳಿದೆ.