ಗೋಮಾಂಸ ನಿಷೇಧ ಕುರಿತ ಚರ್ಚೆ, ಗೋಸಾಗಣೆದಾರರ ಮೇಲಿನ ಹಲ್ಲೆ ಪ್ರಕರಣಗಳ ನಡುವೆಯೇ, ಗೋಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಎಂಬ ಸಂಗತಿ ಬಹಿರಂಗಗೊಂಡಿದೆ.

ನವದೆಹಲಿ(ಜು.30): ಗೋಮಾಂಸ ನಿಷೇಧ ಕುರಿತ ಚರ್ಚೆ, ಗೋಸಾಗಣೆದಾರರ ಮೇಲಿನ ಹಲ್ಲೆ ಪ್ರಕರಣಗಳ ನಡುವೆಯೇ, ಗೋಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದೆ ಎಂಬ ಸಂಗತಿ ಬಹಿರಂಗಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಮತ್ತು ಆರ್ಥಿಕ ಸಹಕಾರ ಸಂಘಟನೆ ಬಿಡುಗಡೆ ಮಾಡಿರುವ ವರದಿ ಅನ್ವಯ, ಜಾಗತಿಕ ಗೋಮಾಂಸ ರಫ್ತಿನಲ್ಲಿ ಶೇ.16 ಪಾಲಿನೊಂದಿಗೆ ಭಾರತ ಮೂರನೇ ಸ್ಥಾನ ಪಡೆದಿದೆ. ಬ್ರೆಜಿಲ್ ವಿಶ್ವದ ಅತಿದೊಡ್ಡ ಗೋಮಾಂಸ ರಫ್ತು ದೇಶವಾಗಿದ್ದರೆ, ಆಸ್ಟೇಲಿಯಾ ಎರಡನೇ ಸ್ಥಾನದಲ್ಲಿದೆ. ಭಾರತ 2016ರಲ್ಲಿ 15.6 ಲಕ್ಷ ಟನ್ ದನದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡಿದೆ.

ಜೊತೆಗೆ 19.3 ಲಕ್ಷ ಟನ್ ಗೋಮಾಂಸ ರಫ್ತು ಮಾಡುವುದರೊಂದಿಗೆ 2026ರ ವರೆಗೂ ಭಾರತ ಗೋ ಮಾಂಸ ರಫ್ತಿನಲ್ಲಿ ಮೂರನೇ ಸ್ಥಾನದಲ್ಲಿಯೇ ಮುಂದುವರಿಯುವ ನಿರೀಕ್ಷೆ ಇದೆ. 2016ರಲ್ಲಿ ಜಾಗತಿಕವಾಗಿ 1.1 ಕೋಟಿ ಟನ್ ಗೋಮಾಂಸ ರಫ್ತಾಗಿದೆ ಎಂದು ವರದಿ ಹೇಳಿದೆ.