ಮುಂದಿನ ವರ್ಷದ ಗಣರಾಜ್ಯೋತ್ಸದ ಅತಿಥಿಯಾಗಿ ಡೊನಾಲ್ಡ್ ಟ್ರಂಪ್

India invites Donald Trump to be chief guest at next year’s  Republic Day
Highlights

  • ಬರಾಕ್ ಒಬಾಮಾ 2015ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು
  • ಹೆಚ್ 1 ವಿಸಾ, ಆಮದು ತೆರಿಗೆ ಹೆಚ್ಚಳ, 2 + 2 ಮಾತುಕತೆ ಮುಂದೂಡಿಕೆ ಸೇರಿದಂತೆ ಹಲವು ವಿವಾದಗಳಿದ್ದರೂ ಟ್ರಂಪ್ ಆಹ್ವಾನ ಉತ್ತಮ ಬೆಳವಣಿಗೆಯಾಗಿದೆ

ನವದೆಹಲಿ[ಜು.13]: ಮುಂದಿನ ವರ್ಷದ ಗಣರಾಜ್ಯೋತ್ಸದ ಮುಖ್ಯಅತಿಥಿಯಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸುವ ಸಾಧ್ಯತೆಯಿದೆ.

ಕೇಂದ್ರ ಸರ್ಕಾರವು ಡೊನಾಲ್ಡ್ ಟ್ರಂಪ್ ಅವರನ್ನು ಈ ವರ್ಷದ ಏಪ್ರಿಲ್'ನಲ್ಲಿಯೇ ಆಹ್ವಾನಿಸಿದ್ದು ಶ್ವೇತ ಭವನದ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಹೆಚ್ 1 ವಿಸಾ, ಆಮದು ತೆರಿಗೆ ಹೆಚ್ಚಳ, 2 + 2 ಮಾತುಕತೆ ಮುಂದೂಡಿಕೆ ಸೇರಿದಂತೆ ಹಲವು ವಿವಾದಗಳಿದ್ದರೂ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.    

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 2015ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. 2016ರಲ್ಲಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್, 2017ರಲ್ಲಿ ಅಬುಧಾಬಿ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್  ಹಾಗೂ 2018ರಲ್ಲಿ ಆಸಿಯಾನ್ ದೇಶದ ನಾಯಕರು ಗಣ್ಯ ಅತಿಥಿಗಳಾಗಿ ಆಗಮಿಸಿದ್ದರು.

loader