ಮೊಬೈಲ್ ಉತ್ಪಾದನೆಯಲ್ಲಿ ಭಾರತ ನಂ 2

First Published 2, Apr 2018, 9:52 AM IST
India got 2 nd place in Mobile Manufacture
Highlights

ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2 ನೇ ಅತಿದೊಡ್ಡ ರಾಷ್ಟ್ರವಾಗಿರುವ  ಭಾರತ, ಇದೀಗ ಮೊಬೈಲ್ ಉತ್ಪಾದನೆಯಲ್ಲೂ 2 ನೇ ಸ್ಥಾನಕ್ಕೆ ಏರಿದೆ. 2017 ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟಾರೆ 1.1  ಕೋಟಿ ಮೊಬೈಲ್ ಉತ್ಪಾದನೆಯಾ ಗಿದ್ದು, ಇದು ಭಾರತವನ್ನು 2 ನೇ ಸ್ಥಾನಕ್ಕೆ ಕೊಂಡೊಯ್ದಿದೆ.

ನವದೆಹಲಿ (ಏ. 02):  ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2 ನೇ ಅತಿದೊಡ್ಡ ರಾಷ್ಟ್ರವಾಗಿರುವ  ಭಾರತ, ಇದೀಗ ಮೊಬೈಲ್ ಉತ್ಪಾದನೆಯಲ್ಲೂ 2 ನೇ ಸ್ಥಾನಕ್ಕೆ ಏರಿದೆ. 2017 ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟಾರೆ 1.1  ಕೋಟಿ ಮೊಬೈಲ್ ಉತ್ಪಾದನೆಯಾ ಗಿದ್ದು, ಇದು ಭಾರತವನ್ನು 2 ನೇ ಸ್ಥಾನಕ್ಕೆ ಕೊಂಡೊಯ್ದಿದೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ  ಸಚಿವ ರವಿಶಂಕರ್ ಪ್ರಸಾದ್ ಮತ್ತು  ಟೆಲಿಕಾಂ ಸಚಿವ ಮನೋಜ್ ಸಿನ್ಹಾಗೆ ಬರೆದ ಪತ್ರದಲ್ಲಿ ಇಂಡಿಯನ್ ಸೆಲ್ಯುಲಾರ್ ಅಸೋಸಿಯೇಷನ್ (ಐಸಿಎ) ಈ ಮಾಹಿತಿ ನೀಡಿದೆ. 2014 ರಲ್ಲಿ ವಾರ್ಷಿಕ 30 ಲಕ್ಷ ಮೊಬೈಲ್ ಉತ್ಪಾದಿಸುತ್ತಿದ್ದ ಭಾರತ 2017 ರಲ್ಲಿ 1.1 ಕೋಟಿಗಿಂತ ಹೆಚ್ಚಿನ ಮೊಬೈಲ್ ಉತ್ಪಾದನೆ ಮೂಲಕ  ವಿಯೆಟ್ನಾಂ ದೇಶವನ್ನು ಹಿಂದಿಕ್ಕಿ 2 ನೇ ಸ್ಥಾನಕ್ಕೆ ಏರಿದೆ. 2014 ರಲ್ಲಿ ಜಾಗತಿಕ  ಮೊಬೈಲ್ ಉತ್ಪಾದನೆಯಲ್ಲಿ ಭಾರತದ  ಪಾಲು ಶೇ.3 ರಷ್ಟು ಇದ್ದಿದ್ದು, 2017 ರಲ್ಲಿ  ಶೇ.11ಕ್ಕೆ ಏರಿದೆ. ಅದೇ ರೀತಿ  2017ರಲ್ಲಿ
ವಿದೇಶದಿಂದ ಭಾರತಕ್ಕೆ ಆಮದಾಗುವ  ಮೊಬೈಲ್ ಆಮದಿನ ಪ್ರಮಾಣದಲ್ಲಿ  ಶೇ. 50 ಕ್ಕಿಂತ ಹೆಚ್ಚು ಇಳಿಕೆಯಾಗಿದೆ  ಎಂದು ಐಸಿಎ ತಿಳಿಸಿದೆ

loader