Asianet Suvarna News Asianet Suvarna News

ವಾಯುಪಡೆಗೆ ‘ಚಿನೂಕ್‌’ ಬಲ

ವಾಯುಪಡೆಗೆ ‘ಚಿನೂಕ್‌’ ಬಲ | ಮೊದಲ ಕಾಪ್ಟರ್‌ ಭಾರತಕ್ಕೆ ಹಸ್ತಾಂತರಿಸಿದ ಬೋಯಿಂಗ್‌ |  10 ಟನ್‌ ಭಾರ ಹೊರುವ, 2 ರೆಕ್ಕೆಯ ಕಾಪ್ಟರ್‌ ಇದು

India gets its first Chinook helicopter from US's Boeing
Author
Bengaluru, First Published Feb 3, 2019, 9:09 AM IST

ನವದೆಹಲಿ (ಫೆ.03): ಯುದ್ಧದಂತಹ ಸನ್ನಿವೇಶ ಎದುರಾದಾಗ ಪರ್ವತ ಪ್ರದೇಶಗಳಿಗೆ ಯೋಧರು, ದೈತ್ಯ ಉಪಕರಣಗಳು, ಗನ್‌ಗಳಂತಹ ಸಲಕರಣೆಗಳನ್ನು ಹೊತ್ತೊಯ್ಯಬಲ್ಲ ದೈತ್ಯ ಸಾಮರ್ಥ್ಯದ, ಮೊದಲ ‘ಚಿನೂಕ್‌’ ಹೆಲಿಕಾಪ್ಟರ್‌ ಭಾರತಕ್ಕೆ ಹಸ್ತಾಂತರವಾಗಿದೆ.

15 ಚಿನೂಕ್‌ ಹೆಲಿಕಾಪ್ಟರ್‌ಗಳು ಹಾಗೂ 22 ಅಪಾಚೆ ದಾಳಿ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಅಮೆರಿಕದ ಬೋಯಿಂಗ್‌ ಕಂಪನಿಗೆ 2015ರಲ್ಲಿ ಭಾರತ ಗುತ್ತಿಗೆ ನೀಡಿತ್ತು. ಅಷ್ಟೂಕಾಪ್ಟರ್‌ಗಳು ಭಾರತಕ್ಕೆ ಇದೇ ವರ್ಷ ಸಿಗಲಿವೆ. ಆ ಪೈಕಿ ಮೊದಲ ಚಿನೂಕ್‌ ಕಾಪ್ಟರ್‌ ಅನ್ನು ಅಮೆರಿಕದ ಬೋಯಿಂಗ್‌ ಘಟಕದಲ್ಲಿ ನಡೆದ ಸಮಾರಂಭದಲ್ಲಿ ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಹಷ್‌ರ್‍ ಶೃಂಗ್ಲಾ ಅವರು ಸ್ವೀಕರಿಸಿದ್ದಾರೆ.

9.6 ಟನ್‌ವರೆಗಿನ ಭಾರದ ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಚಿನೂಕ್‌ ಕಾಪ್ಟರ್‌ಗಳು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ ಬಲವನ್ನು ಆಧುನೀಕರಣಗೊಳಿಸುವ ನಿರೀಕ್ಷೆ ಇದೆ. ಈಗಾಗಲೇ ವಿಶ್ವದ 18 ದೇಶಗಳು ಈ ಕಾಪ್ಟರ್‌ ಬಳಸುತ್ತಿವೆ.

ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಬೇಕಾದ ಎಲ್ಲ ಬಗೆಯ ಸರಕನ್ನು ಈ ಕಾಪ್ಟರ್‌ ಹೊತ್ತೊಯ್ಯಬಲ್ಲದು. ಹಿಂದೆ ಹಾಗೂ ಮುಂದೆ ಎರಡು ಭಾಗದಲ್ಲಿ ದೈತ್ಯ ರೆಕ್ಕೆಗಳನ್ನು ಹೊಂದಿರುವ ಈ ಕಾಪ್ಟರ್‌ ಪರ್ವತ ಪ್ರದೇಶಗಳಿಗೆ ಯೋಧರನ್ನು ಇಳಿಸುವ, ಕರೆತರುವ ಕೆಲಸ ಮಾಡುತ್ತದೆ. ಜತೆಗೆ ಭಾರದ ಮಿಲಿಟರಿ ಉಪಕರಣಗಳನ್ನು ಬೇಕೆಂದರಲ್ಲಿ ಇಳಿಸುತ್ತದೆ. ಈ ಕಾಪ್ಟರ್‌ ಚಾಲನೆ ಕುರಿತಂತೆ ಕಳೆದ ಅಕ್ಟೋಬರ್‌ನಲ್ಲಿ ವಾಯುಪಡೆಯ ನಾಲ್ವರು ಎಂಜಿನಿಯರ್‌ಗಳಿಗೆ ಬೋಯಿಂಗ್‌ ತರಬೇತಿ ನೀಡಿದೆ.

ಚಿನೂಕ್‌ ವೈಶಿಷ್ಟ್ಯ

- 9.6 ಟನ್‌ ಭಾರದವರೆಗೆ ಸರಕು ಹೊತ್ತೊಯ್ಯುವ ಸಾಮರ್ಥ್ಯ

- 18 ದೇಶಗಳಿಂದ ಚಿನೂಕ್‌ ಹೆಲಿಕಾಪ್ಟರ್‌ ಬಳಕೆ

- ಗುಡ್ಡಗಾಡು ಪ್ರದೇಶಕ್ಕೂ ಯೋಧರನ್ನು ಹಾಗೂ ಸರಕನ್ನು ಒಯ್ಯುವ, ತರುವ ಕ್ಷಮತೆ

Follow Us:
Download App:
  • android
  • ios