Asianet Suvarna News Asianet Suvarna News

ಮೇರೆ ಪ್ಯಾರೆ ದೇಶ್ ವಾಸಿಯೋ ಜೋಕ್ ಬಗ್ಗೆ ಮೋದಿ ಹೇಳೋದೇನು?

ಸಂಜೆ ಭಾಷಣ ಮಾಡುವಾಗ ತಮ್ಮ ಮೇರೆ ಪ್ಯಾರೆ ದೇಶ ವಾಸಿಯೋ ಎಂಬ ಸಂಬೋಧನೆ ಎನ್ನುವುದು ಹೇಗೆ ಹಾಸ್ಯಕ್ಕೆ ಒಳಗಾಗಿದೆ ಎನ್ನುವುದು ಗೊತ್ತಿದೆ ಎಂದು ಜೋರಾಗಿ ನಕ್ಕರು ಮೋದಿ. ಆದರೆ, ಮಾಡಬೇಕಾದ ಕೆಲಸವನ್ನು ಮಾಡಿಯೇ ಮಾಡುತ್ತೇನೆ. ನನ್ನ ಕಪ್ಪು ಹಣದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹೇಳಿದಾಗ ಸಭೆಯಲ್ಲಿ ನಿಶ್ಯಬ್ದ ಮೌನವಿತ್ತು.

india gate modi mere pyare desh vasiyon

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ದೆಹಲಿಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬೆಳಿಗ್ಗೆ 10:30ಕ್ಕೆ ಒಳಗಡೆ ಬಂದ ಪ್ರಧಾನಿ ನರೇಂದ್ರ ಮೋದಿ ಸಂಜೆ ತಮ್ಮ ಭಾಷಣದ ಸರದಿ ಬರುವವರೆಗೂ ಕುಳಿತೇ ಇದ್ದರು. ಸ್ವಯಂ ಮೋದಿ ಸಾಹೇಬರೇ ಅಲ್ಲಿ ಕುಳಿತ ಮೇಲೆ ಬೇರೆ ನಾಯಕರು ಬೇರೆ ದಾರಿಯಿಲ್ಲದೆ ಅಲ್ಲಿಯೇ ಇರಬೇಕಾಯಿತು. ಸಂಜೆ ಭಾಷಣ ಮಾಡುವಾಗ ತಮ್ಮ ಮೇರೆ ಪ್ಯಾರೆ ದೇಶ ವಾಸಿಯೋ ಎಂಬ ಸಂಬೋಧನೆ ಎನ್ನುವುದು ಹೇಗೆ ಹಾಸ್ಯಕ್ಕೆ ಒಳಗಾಗಿದೆ ಎನ್ನುವುದು ಗೊತ್ತಿದೆ ಎಂದು ಜೋರಾಗಿ ನಕ್ಕರು ಮೋದಿ. ಆದರೆ, ಮಾಡಬೇಕಾದ ಕೆಲಸವನ್ನು ಮಾಡಿಯೇ ಮಾಡುತ್ತೇನೆ. ನನ್ನ ಕಪ್ಪು ಹಣದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹೇಳಿದಾಗ ಸಭೆಯಲ್ಲಿ ನಿಶ್ಯಬ್ದ ಮೌನವಿತ್ತು. ಅಂದಹಾಗೆ ಮೋದಿ ನವರಾತ್ರಿಯಲ್ಲಿ ಉಪವಾಸವಿರುತ್ತಾರೆ. ಒಂಭತ್ತೂ ದಿನ ಕೇವಲ ನಿಂಬೆಹಣ್ಣು ಹಾಗೂ ಬಿಸಿನೀರು ಸೇವಿಸಿಕೊಂಡಿರುತ್ತಾರೆ.

ಕಾರ್ಯಕರ್ತ ಯೋಗಿ:
ಬಿಜೆಪಿ ಕಾರ್ಯಕಾರಿಣಿ ಸಭೆಯ ವೇದಿಕೆಯಲ್ಲಿ ಭಾಷಣಕ್ಕಾಗಿ ಇಟ್ಟಿದ್ದ ಪೋಡಿಯಮ್ ಮೇಲೆ ಅಂಟಿಸಿದ್ದ ಪಂಡಿತ್ ದೀನದಯಾಳ್ ಅವರ ಭಾವಚಿತ್ರ ಬೀಳುತ್ತಿತ್ತು. 4-5 ಬಾರಿ ತಾನೇ ಕೆಳಗೆ ಕುಳಿತು ಆ ಭಾವ ಚಿತ್ರವನ್ನು ಸರಿಯಾಗಿ ಅಂಟಿಸುತ್ತಿದ್ದರು ದೇಶದ ಅತ್ಯಂತ ದೊಡ್ಡ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಅಂದಹಾಗೆ, ಇಡೀ ದಿನದ ಕಾರ್ಯಕಾರಿಣಿಯಲ್ಲಿ ದೇಶದೆಲ್ಲೆಡೆಯಿಂದ ಬಂದಿದ್ದ ಬಿಜೆಪಿ ನಾಯಕರು ಸೆಲ್ಫಿಗಾಗಿ ಅತೀ ಹೆಚ್ಚು ಬೆನ್ನು ಹತ್ತಿದ್ದು ಯೋಗಿಯನ್ನು.

(ಈ ಲೇಖನದ ಪೂರ್ಣ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ)

- ಪ್ರಶಾಂತ್ ನಾತು, ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios