ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೂ ಕೂಡ ಗೊತ್ತಿರಲಿಲ್ಲ ಎನ್ನುತ್ತಿವೆ ಬಿಜೆಪಿ ಮೂಲಗಳು. ವಿಷಯ ಏನಪ್ಪಾ ಎಂದರೆ ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ರಾಜನಾಥ್ ಸಿಂಗ್ ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಅಮಿತ್ ಶಾ ಬಳಿ ಅವರಿಗೆ ಯಾವ ಖಾತೆ ಎಂದು ಕೇಳಿದ್ದಾರೆ. ಆಗ ಶಾ ನಗರಾಭಿವೃದ್ಧಿ ಖಾತೆ ಎಂದು ಹೇಳಿದರಂತೆ. ಆದರೆ ಸಂಜೆ ನೋಡುವಾಗ ನಿರ್ಮಲಾ ರಕ್ಷಣಾ ಸಚಿವರಾಗಿದ್ದರು.

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೂ ಕೂಡ ಗೊತ್ತಿರಲಿಲ್ಲ ಎನ್ನುತ್ತಿವೆ ಬಿಜೆಪಿ ಮೂಲಗಳು. ವಿಷಯ ಏನಪ್ಪಾ ಎಂದರೆ ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ರಾಜನಾಥ್ ಸಿಂಗ್ ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಅಮಿತ್ ಶಾ ಬಳಿ ಅವರಿಗೆ ಯಾವ ಖಾತೆ ಎಂದು ಕೇಳಿದ್ದಾರೆ. ಆಗ ಶಾ ನಗರಾಭಿವೃದ್ಧಿ ಖಾತೆ ಎಂದು ಹೇಳಿದರಂತೆ. ಆದರೆ ಸಂಜೆ ನೋಡುವಾಗ ನಿರ್ಮಲಾ ರಕ್ಷಣಾ ಸಚಿವರಾಗಿದ್ದರು. ಬಿಜೆಪಿ ಮೂಲಗಳ ಪ್ರಕಾರ ಅಮಿತ್ ಶಾ ಅವರು ರಾಜನಾಥ್‌'ರಂತಹ ಸೀನಿಯರ್ ನಾಯಕರ ಬಳಿ ಹಾಗೆಯೇ ಏನೋ ಹೇಳಿರಲಕ್ಕಿಲ್ಲ. ಆದರೆ ನಿರ್ಮಲಾಗೆ ರಕ್ಷಣಾ ಖಾತೆ ಕೊಟ್ಟಿರುವುದು ಬಿಜೆಪಿ ನಾಯಕರಿಗೆ ತೀರಾ ಇರಿಸುಮುರುಸು ಆಗಿದ್ದು, ನಿತಿನ್ ಗಡ್ಕರಿ ಅಂತೂ ಇದು ಸರಿಯಾಗಲಿಲ್ಲ ಎಂದು ನೇರವಾಗಿಯೇ ಸಂಘದ ನಾಯಕರ ಬಳಿ ಹೇಳಿಕೊಂಡಿದ್ದಾರೆ.

ಸಾಲು ಸಾಲು ವಕೀಲರು:
ಕಳೆದ ವಾರ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರ ಪ್ರಕರಣ ಸುಪ್ರೀಂಕೋರ್ಟ್‌'ನಲ್ಲಿ ವಿಚಾರಣೆಗೆ ಬಂದಾಗ ನಿರಾಶ್ರಿತರ ಪರವಾಗಿ ವಾದಿಸಲು ಸಾಲು ಸಾಲು ವಕೀಲರ ದಂಡೇ ಸುಪ್ರೀಂಕೋರ್ಟ್‌'ನಲ್ಲಿ ನೆರೆದಿತ್ತು. ಫಾಲಿ ನಾರಿಮನ್, ಕಪಿಲ್ ಸಿಬಲ್, ರಾಜೀವ್ ಧವನ್, ಪ್ರಶಾಂತ್ ಭೂಷಣ್ ಸೇರಿದಂತೆ ದೇಶದ ಖ್ಯಾತನಾಮ ವಕೀಲರು ನಿರಾಶ್ರಿತರ ಹಕ್ಕುಗಳ ವಾದ ಮಂಡನೆಗಾಗಿ ನ್ಯಾಯಪೀಠದ ಎದುರು ನಿಂತಿದ್ದರು. ಅಂದ ಹಾಗೆ ಮೇಲೆ ಹೆಸರಿಸಿದ ಸುಪ್ರೀಂಕೋರ್ಟ್‌'ನ ಹಿರಿಯ ವಕೀಲರು ಒಮ್ಮೆ ಕೋರ್ಟ್‌'ನಲ್ಲಿ ವಾದಿಸಲು ಒಂದು ದಿನಕ್ಕೆ 5ರಿಂದ 7 ಲಕ್ಷ ರು. ಮುಂಗಡ ಫೀಸ್ ಪಡೆಯುತ್ತಾರೆ.

(ಈ ಲೇಖನದ ಪೂರ್ಣ ಭಾಗಕ್ಕೆ ಇಲ್ಲಿ ಕ್ಲಿಕ್ ಮಾಡಿ)

- ಪ್ರಶಾಂತ್ ನಾತು, ಸುವರ್ಣ ನ್ಯೂಸ್