Asianet Suvarna News Asianet Suvarna News

ಗುಜರಾತ್'ನಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹೇಗೆ ನಡೆಯುತ್ತೆ?

* ಗುಜರಾತ್'ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ತಯಾರಿಕೆಯ ರಹಸ್ಯ

* ಗುಜರಾತ್ ಬಿಜೆಪಿ ಚುನಾವಣಾ ಸಮಿತಿ ಕಳುಹಿಸುವ ಪಟ್ಟಿಯೇ ಫೈನಲ್

* 2002ರಲ್ಲಿ ಕೇವಲ 5 ನಿಮಿಷದಲ್ಲಿ ಫೈನಲ್ ಮಾಡಿತ್ತು ಬಿಜೆಪಿ ಸಂಸದೀಯ ಮಂಡಳಿ

india gate 31 oct 17 know how bjp candidates finalized in gujarat

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ಗುಜರಾತ್ ಪಟ್ಟಿಯನ್ನು 2002ರಿಂದ ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ ಕೇವಲ 5 ನಿಮಿಷದಲ್ಲಿ ಓಕೇ ಮಾಡುತ್ತದೆಯಂತೆ. ಎಲ್ಲಾ ಕ್ಷೇತ್ರಗಳಿಗೂ ಸಿಂಗಲ್ ಹೆಸರನ್ನು ಗುಜರಾತ್ ಬಿಜೆಪಿ ಚುನಾವಣಾ ಸಮಿತಿ ಕಳಿಸುತ್ತದೆಯಂತೆ. ಅದನ್ನು ಜಾಸ್ತಿ ತಲೆ ಕೆಡಿಸಿಕೊಳ್ಳದೆ 5 ನಿಮಿಷದಲ್ಲಿ ಒಪ್ಪಿಗೆ ಕೊಟ್ಟು ಹೋಗುವುದು ಮಾತ್ರ ಪಾರ್ಲಿಮೆಂಟರಿ ಬೋರ್ಡ್ ಕೆಲಸವಂತೆ. ಆದರೆ 2009 ರಲ್ಲಿ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿ ಮತ್ತು ಮೋದಿ ನಡುವೆ ಹರೇನ್ ಪಾಠಕ್ ಅವರ ಒಂದು ಸೀಟಿಗಾಗಿ ಸ್ವಲ್ಪ ಮಾತಿಗೆ ಮಾತು ಆಗಿತ್ತಂತೆ. ಇನ್ನು 2012ರಲ್ಲಿ ಮಾಯಾ ಕೊಡ್ನಾನಿಗೋಸ್ಕರ ಕೂಡ ಮೋದಿ ಮತ್ತು ರಾಜನಾಥ್ ಸಿಂಗ್ ನಡುವೆ ವಾದಪ್ರತಿವಾದ ನಡೆದಿತ್ತಂತೆ. ಈಗ ಬಿಡಿ, ಮೋದಿ ಮತ್ತು ಶಾ ತರುವ ಪಟ್ಟಿಯನ್ನು ಬಹಳ ಚೆನ್ನಾಗಿದೆ ಎಂದು ಹೇಳಿ ಒಪ್ಪಿಗೆ ಕೊಡುವುದಷ್ಟೇ ಬಿಜೆಪಿ ಸಂಸದೀಯ ಮಂಡಳಿ ಕೆಲಸ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್
epaperkannadaprabha.com

---------

ಇಂಡಿಯಾ ಗೇಟ್ ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ

ಇವನ್ನೂ ಓದಿ:

* ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಬೇರೆ ರಾಜ್ಯದ ಚುನಾವಣೆಯತ್ತ ರಾಜಕಾರಣಿಗಳ ಲಕ್ಷ್ಯ

* ರಾಹುಲ್'ಗೆ ಪಟ್ಟ; ಸೋನಿಯಾ ಕನ್'ಫ್ಯೂಷನ್; ಕಾರಣ ಏನು?

* ಕಾಂಗ್ರೆಸ್ ಗೆದ್ದರೆ ಆಂಜನೇಯ ಉಪಮುಖ್ಯಮಂತ್ರಿ?

* ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಅಖಾಡಕ್ಕಿಳಿಯಲಿರುವ 250 ಪ್ರಬಲ ಆರೆಸ್ಸೆಸ್ ವಿಸ್ತಾರಕರು

* ದಿಲ್ಲಿ ಜನರ ಬಗ್ಗೆ ಗಡ್ಕರಿಗೆ ಯಾಕೆ ಬೇಜಾರು? ಮಂಚ ಮುರಿದುಬಿದ್ದ ಪ್ರಸಂಗ ನೆನಪಿಸಿಕೊಂಡ ಗಡ್ಕರಿ

* ಟಿಪ್ಪು ಹೊಗಳಿದ ರಾಷ್ಟ್ರಪತಿಗೆ ಆ ಭಾಷಣ ಬರೆದುಕೊಟ್ಟವರಾರು? ಇಲ್ಲಿದೆ ಸೀಕ್ರೆಟ್

Follow Us:
Download App:
  • android
  • ios