* ನವೆಂಬರ್'ನಲ್ಲಿ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕೊಡುವ ಬಗ್ಗೆ ಸೋನಿಯಾ ಗೊಂದಲ* ಗುಜರಾತ್ ಚುನಾವಣೆಗೆ ಮುಂಚೆಯೇ ರಾಹುಲ್'ಗೆ ಪಟ್ಟಕಟ್ಟಲು ಸೋನಿಯಾ ಹಿಂದೇಟು* ಗುಜರಾತ್'ನಲ್ಲಿ ಚುನಾವಣೆ ಸೋತರೆ ರಾಹುಲ್ ಹೊಣೆಹೊರಬೇಕಾಗುತ್ತದೆ ಎಂಬ ಭಯ

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವೆಂಬರ್‌'ನಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಸ್ವತಃ ಸೋನಿಯಾ ಅವರೇ ಫೈನಲ್ ಮಾಡಿದ್ದಾರಾದರೂ, ಗುಜರಾತ್ ಚುನಾವಣೆ ಪ್ರಕಟವಾದ ಮೇಲೆ ದ್ವಂದ್ವದಲ್ಲಿದ್ದಾರಂತೆ. ಸೋನಿಯಾ ಕಳೆದ ವಾರ ತನ್ನ ಪರಮಾಪ್ತರಾದ ಎ.ಕೆ ಅಂತೋನಿ ಮತ್ತು ಆಸ್ಕರ್ ಫರ್ನಾಂಡಿಸ್ ಅವರನ್ನು ಈ ಬಗ್ಗೆ ಅಭಿಪ್ರಾಯ ಕೇಳಿದಾಗ ಅಂತೋನಿ ಮಾತ್ರ, ಗುಜರಾತ್ ಚುನಾವಣೆ ನಂತರ ಮಾಡೋಣ ಎಂದು ಹೇಳಿದ್ದಾರಂತೆ. ಈಗ ದೊಡ್ಡದಾಗಿ ಅಧ್ಯಕ್ಷ ಮಾಡಿ ಗುಜರಾತ್, ಹಿಮಾಚಲ ಎರಡೂ ಸೋತರೆ ರಾಹುಲ್ ತಂದರೂ ಉಪಯೋಗವಾಗಲಿಲ್ಲ ಎಂದು ಸಂದೇಶ ಹೋಗುತ್ತದೆ. ಒಂದು ವೇಳೆ ಗುಜರಾತ್ ಗೆದ್ದರೆ, ಅದರ ಕಥೆಯೇ ಬೇರೆ. ಆದರೆ ಗುಜರಾತ್ ಸೋತರು ಕೂಡ ಹೊಸ ಪೀಳಿಗೆಗೆ ಅಧ್ಯಕ್ಷ ಸ್ಥಾನ ಎಂದು ಹೇಳಿ ಸಮಜಾಯಿಷಿ ಕೊಡಬಹುದು ಎಂದು ಹೇಳಿದರಂತೆ. ಪರಮನಿಷ್ಠ ಅಂತೋನಿ ಹೀಗೆ ಹೇಳಿದ ಮೇಲೆ ಸೋನಿಯಾ ಸ್ವಲ್ಪ ಯೋಚನೆಯಲ್ಲಿದ್ದಾರಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್
epaperkannadaprabha.com

-----

ಇಂಡಿಯಾ ಗೇಟ್ ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ

ಇವನ್ನೂಓದಿ:

* ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಬೇರೆ ರಾಜ್ಯದ ಚುನಾವಣೆಯತ್ತ ರಾಜಕಾರಣಿಗಳ ಲಕ್ಷ್ಯ

* ಕಾಂಗ್ರೆಸ್ ಗೆದ್ದರೆ ಆಂಜನೇಯ ಉಪಮುಖ್ಯಮಂತ್ರಿ?

* ಗುಜರಾತ್'ನಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹೇಗೆ ನಡೆಯುತ್ತೆ?

* ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಅಖಾಡಕ್ಕಿಳಿಯಲಿರುವ 250 ಪ್ರಬಲ ಆರೆಸ್ಸೆಸ್ ವಿಸ್ತಾರಕರು

* ದಿಲ್ಲಿ ಜನರ ಬಗ್ಗೆ ಗಡ್ಕರಿಗೆ ಯಾಕೆ ಬೇಜಾರು? ಮಂಚ ಮುರಿದುಬಿದ್ದ ಪ್ರಸಂಗ ನೆನಪಿಸಿಕೊಂಡ ಗಡ್ಕರಿ

* ಟಿಪ್ಪು ಹೊಗಳಿದ ರಾಷ್ಟ್ರಪತಿಗೆ ಆ ಭಾಷಣ ಬರೆದುಕೊಟ್ಟವರಾರು? ಇಲ್ಲಿದೆ ಸೀಕ್ರೆಟ್