Asianet Suvarna News Asianet Suvarna News

2002ರಲ್ಲಿ ವಾಜಪೇಯಿಯಿಂದ ಮೋದಿಗಾದ ಗತಿ ಈಗ ಖಟ್ಟರ್'ಗೆ? ಇಂಡಿಯಾ ಗೇಟ್ ಸ್ಟೋರಿ

ನರೇಂದ್ರ ಮೋದಿ ಹರಿಯಾಣ ಬಿಜೆಪಿಯ ಪ್ರಭಾರಿಯಾಗಿದ್ದಾಗ ಖಟ್ಟರ್ ಅಲ್ಲಿನ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿದ್ದರಂತೆ. ಇಬ್ಬರೂ ಆಗ ಜೊತೆಗೂಡಿ ದಾಲ್ ಖಿಚಡಿ ಮಾಡಿಕೊಳ್ಳುತ್ತಿದ್ದರಂತೆ. ಹೀಗಾಗಿಯೇ ಮೋದಿ ಸಾಹೇಬರು ಹರಿಯಾಣದಲ್ಲಿ ಅಧಿಕಾರ ಸಿಕ್ಕಾಗ ತನ್ನಂತೆ ಮದುವೆಯಾಗದೆ ಇರುವ ಸಂಘಿ ಎನ್ನುವ ಕಾರಣಕ್ಕಾಗಿ ಖಟ್ಟರ್‌'ರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದರು.

india gate 29 aug 2017 khattar faces heat from pm modi

ಇಂಡಿಯಾ ಗೇಟ್ | ದೆಹಲಿಯಿಂದ ಕಂಡ ರಾಜಕಾರಣ

ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಯಾವುದಾದರೂ ಪ್ರಕರಣದಲ್ಲಿ ಬಿಜೆಪಿ ಸರ್ಕಾರ ಮೇಲ್ನೋಟಕ್ಕೆ ವಿಫಲವಾಗಿರುವ ಪ್ರಕರಣ ಎಂದರೆ ಬಾಬಾ ರಾಮ್ ರಹೀಮ್ ದೋಷಿ ಎಂಬ ಕೋರ್ಟ್ ತೀರ್ಪಿನ ನಂತರ ನಡೆದ ಹಿಂಸಾಚಾರ. ರಾಜ್ಯ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೆ ಹಿಂಸಾಚಾರ ನಡೆದಿರುವ ಬಗ್ಗೆ ಪ್ರಧಾನಿ ಮೋದಿ ತಾನೇ ನೇಮಿಸಿದ ಮುಖ್ಯಮಂತ್ರಿ ಮೇಲೆ ಭಯಂಕರ ಸಿಟ್ಟಾಗಿದ್ದು, ಕೆಲವರು ಹೇಳುತ್ತಿರುವ ಪ್ರಕಾರ ಖಟ್ಟರ್ ಮೇಲೆ ಗರಂ ಆಗಿ ಫೋನ್‌'ನಲ್ಲಿಯೇ ಕೂಗಾಡಿದ್ದಾರಂತೆ. ನಿಮಗೆ ಆಡಳಿತ ನಡೆಸಲು ಬರೋದಿಲ್ಲವಾದರೆ ರಾಜೀನಾಮೆ ಕೊಡಿ ಎಂದು ಝಾಡಿಸಿದ್ದಾರಂತೆ ಕೂಡ. ಅಂದ ಹಾಗೆ 2002ರಲ್ಲಿ ಗುಜರಾತ್ ದಂಗೆಗಳಾದಾಗ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಹೀಗೆಯೇ ತರಾಟೆಗೆ ತೆಗೆದುಕೊಂಡು ರಾಜಧರ್ಮದ ಬೋಧನೆ ಮಾಡಿದ್ದರು. ನರೇಂದ್ರ ಮೋದಿ ಹರಿಯಾಣ ಬಿಜೆಪಿಯ ಪ್ರಭಾರಿಯಾಗಿದ್ದಾಗ ಖಟ್ಟರ್ ಅಲ್ಲಿನ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿದ್ದರಂತೆ. ಇಬ್ಬರೂ ಆಗ ಜೊತೆಗೂಡಿ ದಾಲ್ ಖಿಚಡಿ ಮಾಡಿಕೊಳ್ಳುತ್ತಿದ್ದರಂತೆ. ಹೀಗಾಗಿಯೇ ಮೋದಿ ಸಾಹೇಬರು ಹರಿಯಾಣದಲ್ಲಿ ಅಧಿಕಾರ ಸಿಕ್ಕಾಗ ತನ್ನಂತೆ ಮದುವೆಯಾಗದೆ ಇರುವ ಸಂಘಿ ಎನ್ನುವ ಕಾರಣಕ್ಕಾಗಿ ಖಟ್ಟರ್‌'ರನ್ನು ಮುಖ್ಯಮಂತ್ರಿಯಾಗಿ ನೇಮಿಸಿದ್ದರು.

- ಪ್ರಶಾಂತ್ ನಾತು, ಸುವರ್ಣನ್ಯೂಸ್

Follow Us:
Download App:
  • android
  • ios