ಇದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳು ಹೇಳಿದಂತೆ ನಾವು ಕೇಳಬೇಕಷ್ಟೇ. ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ, ಪ್ರತಿಪಕ್ಷ ಮುಕ್ತ ಭಾರತ ಮಾಡುತ್ತೇವೆಂಬುದೆಲ್ಲ ಕೇವಲ ಅಹಮಿಕೆ. ಜನ ಇಂದು ಅಹಂ ಮುಕ್ತ ಭಾರತ ಮಾಡಿದ್ದಾರೆ. ಸಮಸ್ಯೆ ಮುಕ್ತ ಭಾರತ ಮಾಡುವುದರತ್ತ ಅಧಿಕಾರರೂಢ ಬಿಜೆಪಿ ಮನಸ್ಸು ಮಾಡಲಿ.
— H D Devegowda (@H_D_Devegowda) December 11, 2018
ಕಾಂಗ್ರೆಸ್ ಮುಕ್ತ ಭಾರತ ಕನಸಿಗೆ ತಣ್ಣೀರು, ಬಿಜೆಪಿ ಕಣ್ಣೀರು !

ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟದ ಸರಕಾರ ರಚಿಸುವ ಕನಸು ಕಂಡಿದ್ದ ಬಿಜೆಪಿಗೆ ದೊಡ್ಡ ಹೊಡೆತ. ಕಾಂಗ್ರೆಸ್ ಮುಕ್ತ ಭಾರತದ ಕನಸು ಪೀಸ್ ಪೀಸ್..
ಸಮಸ್ಯೆ ಮುಕ್ತ ಭಾರತವಾಗಲಿ: ಎಚ್ಡಿ
ಮಧ್ಯಪ್ರದೇಶದಲ್ಲಿ ಬಿಎಸ್‌ಪಿಯೇ ಕಿಂಗ್ ಮೇಕರ್
ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬಿರುಸಿನ ಪೈಪೋಟಿ ನಡೆಯುತ್ತಿದ್ದು, 10 ಸ್ಥಾನಗಳಲ್ಲಿ ಮುಂದಿರುವ ಬಿಎಸ್‌ಪಿಯೇ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. 230 ಸದಸ್ಯ ಬಲದ ಮಧ್ಯ ಪ್ರದೇಶ ವಿಧಾನಸಭೆಯಲ್ಲಿ 216 ಮ್ಯಾಜಿಕ್ ನಂಬರ್. 112 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದರೆ, 108 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
ಛತ್ತೀಸ್‌ಗಢ್: ಕಾಂಗ್ರೆಸ್‌ಗೆ ಮುನ್ನಡೆ
ಕಾಂಗ್ರೆಸ್: 57
ಬಿಜೆಪಿ: 25
ಇತರೆ: 08
ಪಂಚ ರಾಜ್ಯ ಚುನಾವಣಾ ಫಲಿತಾಂಶ: ಪ್ರತಿಕ್ರಿಯೆ ನೀಡದ ಮೋದಿ
ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ತಣ್ಣೀರು
ಬಿಜೆಪಿ ಆಡಳಿತವಿದ್ದು ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರಕಾರ ರಚಿಸುವ ಸಾಧ್ಯತೆಗಳಿದ್ದು, ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ರಚಿಸೋದು ಖಚಿತ
Congress will definitely form the government in MP: @digvijaya_28#ResultsOnDDNews#AssemblyElections2018pic.twitter.com/E2qtw6XC8e
— Doordarshan News (@DDNewsLive) December 11, 2018
ಮೀಜೋರಾಂನಲ್ಲಿ MNFನಿಂದ ಸಿಹಿ ಹಂಚಿಕೆ
Aizawl: Sweets being distributed at Mizo National Front office (MNF) as the party leads in trends in Mizoram. #AssemblyElections2018pic.twitter.com/BMbwTUCSC0
— ANI (@ANI) December 11, 2018
ಮಧ್ಯ ಪ್ರದೇಶದಲ್ಲಿ ಬಿಜೆಪಿ ಗೆಲ್ಲುತ್ತಾ?
ಮಧ್ಯ ಪ್ರದೇಶದಲ್ಲಿ ಸರಕಾರ ರಚಿಸಲು 116 ಮ್ಯಾಜಿಕ್ ನಂಬರ್ ಆಗಿದ್ದು, 112 ಬಿಜೆಪಿ ಮುನ್ನಡೆ ಸಾಧಿಸಿದೆ. 106ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ತೀವ್ರ ಪೈಪೋಟಿ ನೀಡುತ್ತಿದೆ.

ಛತ್ತೀಸ್‌ಗಢ್‌ನಲ್ಲೂ ಕಾಂಗ್ರೆಸ್ ಮ್ಯಾಜಿಕ್ ನಂಬರ್‌ಗೆ ಸಮೀಪ
ರಾಜಸ್ಥಾನದಲ್ಲಿ ಆಗಲೇ ಮ್ಯಾಜಿಕ್ ನಂಬರ್ ಸಮೀಪ ಹೋಗುತ್ತಿರುವ ಕಾಂಗ್ರೆಸ್, ಛತ್ತೀಸ್‌ಗಡ್‌ದಲ್ಲಿ 66 ಮ್ಯಾಜಿಕ್ ನಂಬರ್ ಆಗಿದ್ದು, ಈಗಾಗಲೇ 58 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಬರುತೇಕ ಖಚಿತ
ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಕೆಲಸ ಮಾಡಿದ್ದು, ರಾಜಸ್ಥಾನದಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು, ಸರಕಾರ ರಚಿಸುವುದು ಬಹುತೇಕ ಖಚಿತ.
ರಾಜಸ್ಥಾನ ಸಿಎಂ ವಸುಂಧರಾ ರಾಜೇಗೆ ಮುನ್ನಡೆ
Rajasthan CM Vasundhara Raje leading by 4055 votes from Jhalrapatan, Congress' Ashok Gehlot leading by 5112 votes from Sardarpura. #AssemblyElections2018pic.twitter.com/VSsFmk9b4m
— ANI (@ANI) December 11, 2018
ಸೋಲ್ತಾರಾ ಛತ್ತೀಸ್‌ಗಡ್ ಮಾಜಿ ಸಿಎಂ
According to official ECI trends, former Chhattisgarh CM Ajit Jogi is at third position at Marwahi. BJP is leading and Congress at second ( file pic) #ChhattisgarhAssemblyElections2018pic.twitter.com/fhzR0IZIKl
— ANI (@ANI) December 11, 2018
ಮಿಜೋರಾಂನಲ್ಲಿ ಖಾತೆ ತೆರೆಯುತ್ತಾ ಬಿಜೆಪಿ?
Official ECI trends: Mizo National Front leading on 2 seats, BJP leading on 1 seat in Mizoram. #AssemblyElections2018pic.twitter.com/4gBoxqO2ua
— ANI (@ANI) December 11, 2018
ರಾಜಸ್ಥಾನದಲ್ಲಿ 25 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಕೈ
Official ECI trends: Congress leading on 25 seats and BJP leading on 23 seats in Rajasthan. #AssemblyElections2018pic.twitter.com/1kj4NBgruO
— ANI (@ANI) December 11, 2018
ಕೆಸಿಆರ್ ಬೆಂಬಲಿಸಿದ ಓವೈಸಿಗೆ ಕಾಂಗ್ರೆಸ್ ಬೆಂಬಲ!: ರಿಸಲ್ಟ್‌ಗೂ ಮುನ್ನ ಭಾರೀ ಬೆಳವಣಿಗೆ
ಮಧ್ಯ ಪ್ರದೇಶದಲ್ಲಿ ಶತಕ ಬಾರಿಸಿದ ಕಾಂಗ್ರೆಸ್
- ಛತ್ತೀಸ್‌ಗಡ್‌ನಲ್ಲಿ ಬಿಜೆಪಿಗೆ ಮುನ್ನಡೆ. 27 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
- ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೆಕ್ ಟು ನೆಕ್ ಫೈಟ್
- ಇದನ್ನೂ ಓದಿ: ಕೆಸಿಆರ್ ಬೆಂಬಲಿಸಿದ ಓವೈಸಿಗೆ ಕಾಂಗ್ರೆಸ್ ಬೆಂಬಲ!: ರಿಸಲ್ಟ್‌ಗೂ ಮುನ್ನ ಭಾರೀ ಬೆಳವಣಿಗೆ
- ಮಿಜೋರಾಂನಲ್ಲಿ ಖಾತೆ ತೆರೆದ ಬಿಜೆಪಿ
- ವಿಜೋರಾಂನಲ್ಲಿ ಬಿಜೆಪಿ ಅಭ್ಯರ್ಥಿ ಲಾಲ್ದುಪುಯಿಗೆ ಗೆಲುವು
- ತೆಲಂಗಾಣದಲ್ಲಿ ಬಹುಮತದತ್ತ TRS ಪಕ್ಷ
- ತೆಲಂಗಾಣದ 73 ಕ್ಷೇತ್ರಗಳಲ್ಲಿ ಟಿಆರ್‌ಎಸ್ ಮುನ್ನಡೆ
- ಮಧ್ಯಪ್ರದೇಶದಲ್ಲಿ ಶತಕ ಬಾರಿಸಿದ ಕಾಂಗ್ರೆಸ್. 100 ಕ್ಷೇತ್ರಗಳಲ್ಲಿ ಕೈ ಪಕ್ಷಕ್ಕೆ ಮುನ್ನಡೆ

