Asianet Suvarna News Asianet Suvarna News

ಭಾರತದ ಮೊಟ್ಟ ಮೊದಲ ಮಹಿಳಾ ಡಿಜಿಪಿ ನಿಧನ

ದೇಶದ ಮೊದಲ ಮಹಿಳಾ ಡಿಜಿಪಿ ನಿಧನ| ದೇಶದ ಎರಡನೇ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದ ಕಾಂಚನ್ ಚೌಧರಿ ಭಟ್ಟಾಚಾರ್ಯ| ನಿವೃತ್ತಿ ಬಳಿಕ ರಾಜಕೀಯ ಕ್ಷೇತ್ರದಲ್ಲೂ ಸೇವೆ

India First Woman DGP Kanchan Chaudhary Bhattacharya Dies
Author
Bangalore, First Published Aug 27, 2019, 3:24 PM IST

ದೇಶದ ಮೊಟ್ಟ ಮೊದಲ ಡಿಜಿಪಿ ಕಾಂಚನ್ ಚೌಧರಿ ಭಟ್ಟಾಚಾರ್ಯ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ 72ರ ಹರೆಯದ ಕಾಂಚನ್ ಚೌಧರಿ ಸೋಮವಾರ ತಡರಾತ್ರಿ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

1973ನೇ ಸಾಲಿನ IPS ಅಧಿಕಾರಿಯಾಗಿದ್ದ ಕಾಂಚನ್ ಚೌಧರಿ, ದೇಶದ ಎರಡನೇ ಮಹಿಳಾ IPS ಅಧಿಕಾರಿ. ಇನ್ನು  2004ರಲ್ಲಿ ಉತ್ತರಾಖಂಡ್ ನ ಡಿಜಿಪಿಯಾಗಿ ನೇಮಕವಾಗಿದ್ದ ಕಾಂಚನ್, ದೇಶದ ಮೊಟ್ಟ ಮೊದಲ ಮಹಿಳಾ ಡಿಜಿಪಿ ಎಂಬ ಖ್ಯಾತಿ ಗಳಿಸಿದ್ದರು. ಇದಾದ ಮೂರು ವರ್ಷಗಳಲ್ಲಿ ಅಂದರೆ 2007ರ ಅಕ್ಟೋಬರ್ 31ರಂದು ಅವರು ನಿವೃತ್ತರಾಗಿದ್ದರು. ಎಂಬ ಪ್ರಸಿದ್ಧಿಯೂ ಇವರದ್ದಾಗಿದೆ. 

ನಿವೃತ್ತಿ ಬಳಿಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಕಾಂಚನ್, 2014ರ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಹರಿದ್ವಾರ ಕ್ಷೇತ್ರದಿಂದ ಕಣಕ್ಕಿಳಿದರು. ಆದರೆ ಈ ಅದೃಷ್ಟ ಪರೀಕ್ಷೆಯಲ್ಲಿ ವಿಫಲರಾದರು.

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರೀವಾಲ್ ಟ್ವೀಟ್ ಮೂಲಕ ಕಾಂಚನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಕೇಜ್ರೀವಾಲ್ 'ದೇಶದ ಮೊದಲ ಮಹಿಳಾ DGP ಕಾಂಚನ್ ಚೌಧರಿ ಭಟ್ಟಾಚಾರ್ಯ ನಿಧನದಿಂದ ದುಃಖವಾಗಿದೆ. ನಿವೃತ್ತಿ ಬಳಿಕ ಸಾಮಾಜಿಕ ಜೀವನದಲ್ಲಿ ಅತ್ಯಂತ ಚುರುಕಾಗಿದ್ದ ಕಾಂಚನ್, ತಮ್ಮ ಜೀವನದ ಅಂತಿಮ ಕ್ಷಣದವರೆಗೂ ದೇಶದ ಸೇವೆ ಮಾಡಲಿಚ್ಛಿಸಿದ್ದರು. ನಿಮ್ಮ ಅಗಲುವಿಕೆ ತೀವ್ರವಾಗಿ ಕಾಡಲಿದೆ, ಚಿರಶಾಂತಿ' ಎಂದಿದ್ದಾರೆ.

Follow Us:
Download App:
  • android
  • ios