ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಜಾರಿ ಬಳಿಕ ಶುಭಸುದ್ದಿಯೊಂದು ಸಿಕ್ಕಿದೆ. ಕಳೆದ 5 ತ್ರೈಮಾಸಿಕ ವರದಿಗಳಲ್ಲಿ ಕುಸಿತ ಕಾಣುತ್ತಿದ್ದ ಜಿಡಿಪಿ ದರದಲ್ಲಿ ಈ ಭಾರೀ ಏರಿಕೆಯಾಗಿದೆ.
ನವದೆಹಲಿ (ನ.30): ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಜಾರಿ ಬಳಿಕ ಶುಭಸುದ್ದಿಯೊಂದು ಸಿಕ್ಕಿದೆ. ಕಳೆದ 5 ತ್ರೈಮಾಸಿಕ ವರದಿಗಳಲ್ಲಿ ಕುಸಿತ ಕಾಣುತ್ತಿದ್ದ ಜಿಡಿಪಿ ದರದಲ್ಲಿ ಈ ಭಾರೀ ಏರಿಕೆಯಾಗಿದೆ.
ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.5.7ರಷ್ಟಿದ್ದ ಜಿಡಿಪಿ ದರ ಈಗ ಶೇ.6.3ಗೆ ಏರಿಕೆಯಾಗಿದೆ. ತಯಾರಿಕಾ ಕ್ಷೇತ್ರದಲ್ಲಿ ಭಾರೀ ಸಾಧನೆ ಕಂಡ ಹಿನ್ನೆಲೆಯಲ್ಲಿ ಈ ಏರಿಕೆಯಾಗಿದೆ. ನೋಟ್ಬ್ಯಾನ್ ಮತ್ತು ಜಿಎಸ್ಟಿ ಜಾರಿಯಿಂದ ಈ ಕ್ಷೇತ್ರದ ಅಭಿವೃದ್ಧಿಗೆ ಭಾರೀ ಹಿನ್ನಡೆಯಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದ್ದು, ಈ ಬಾರಿಯ ವರದಿಯಲ್ಲಿ ಆರ್ಥಿಕ ಚೇತರಿಕೆ ಕಂಡಿದೆ. ಕೇಂದ್ರ ಸರ್ಕಾರ ಈ ಬೆಳವಣಿಗೆಯನ್ನು ನಿರೀಕ್ಷಿಸಿತ್ತು. ಹೀಗಾಗಿ ಮುಂದೆ ಇನ್ನಷ್ಟು ಆರ್ಥಿಕ ಚೇತರಿಕೆ ಕಾಣಲಿದೆ ಅನ್ನೋ ಆಶಾಭಾವವನ್ನು ಕೇಂದ್ರ ಸರ್ಕಾರ ಹೊಂದಿದೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ನೋಟ್'ಬ್ಯಾನ್ ಮತ್ತು ಜಿಎಸ್ಟಿ ಜಾರಿಯ ಉತ್ತಮ ಫಲಿತಾಂಶದಿಂದಾಗಿ ಇದೀಗ ಜಿಡಿಪಿ ಭಾರೀ ಏರಿಕೆ ಕಂಡಿದೆ. ಮುಂದೆಯೂ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸಲಿದ್ದು, ನಮ್ಮ ಶ್ರಮಕ್ಕೆ ಫಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
