ಭಾರತ ಹಿಂದುಗಳ ದೇಶ. ಹಾಗೆಂದ ಮಾತ್ರಕ್ಕೆ ಇತರರಿಗೆ ಸೇರಿಲ್ಲ ಎಂದು ಅರ್ಥವಲ್ಲ ಎಂಬ ಆರ್‌ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆಯನ್ನೂ ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಟೀಕಿಸಲಾಗಿದೆ.

ಮುಂಬೈ(ಅ.30): ಕೇಂದ್ರದಲ್ಲಿ ಹಿಂದುತ್ವ ಪರ ಸರ್ಕಾರ ಇದ್ದರೂ, ರಾಮ ಮಂದಿರ ಮತ್ತು ಕಾಶ್ಮೀರ ಪಂಡಿತರ ಘರ್ ವಾಪಸಿ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂದು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿದೆ.

ಭಾರತ ಹಿಂದುಗಳ ದೇಶ. ಹಾಗೆಂದ ಮಾತ್ರಕ್ಕೆ ಇತರರಿಗೆ ಸೇರಿಲ್ಲ ಎಂದು ಅರ್ಥವಲ್ಲ ಎಂಬ ಆರ್‌ಎಸ್ ಮುಖಂಡ ಮೋಹನ್ ಭಾಗವತ್ ಅವರ ಹೇಳಿಕೆಯನ್ನೂ ಶಿವಸೇನಾ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಟೀಕಿಸಲಾಗಿದೆ. ಭಾರತ ಮೊದಲು ಹಿಂದುಗಳಿಗೆ ಸೇರಿದ್ದು, ಬಳಿಕ ಇತರರಿಗೆ ಸೇರಿದೆ. ಮುಸ್ಲಿಮರಿಗಾಗಿ 50ಕ್ಕೂ ಹೆಚ್ಚು ದೇಶಗಳಿವೆ. ಕ್ರಿಶ್ಚಿಯನ್ನರು ಅಮೆರಿಕ, ಯುರೋಪ್‌ನಂಥ ದೇಶಗಳನ್ನು ಹೊಂದಿದ್ದಾರೆ. ಬೌದ್ಧರು ಚೀನಾ, ಜಪಾನ್, ಶ್ರೀಲಂಕಾವನ್ನು ಹೊಂದಿದ್ದಾರೆ. ಆದರೆ, ಹಿಂದುಗಳಿಗೆ ಭಾರತ ಬಿಟ್ಟರೆ ಬೇರೆ ಯಾವ ದೇಶವೂ ಇಲ್ಲ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.