ಬಿಜಿಂಗ್(ಏ.01): ರಷ್ಯಾದಿಂದ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ5 ನೇ ತಲೆಮಾರಿನ ಸುಖೋಯ್ ಎಸ್ ಯು-57 ಜೆಟ್ ಯುದ್ಧ ವಿಮಾನವನ್ನು ಖರೀದಿಸಲು ಚೀನಾ ಚಿಂತನೆ ನಡೆಸಿದೆ. 

ರಷ್ಯಾ ಅದೇ ಮಾದರಿಯ ಫೈಟರ್ ಜೆಟ್‌ಗಳನ್ನು ಭಾರತಕ್ಕೂ ನೀಡುವಲ್ಲಿ ಉತ್ಸುಕವಾಗಿದ್ದು, ಚೀನಾ ಮತ್ತು ಭಾರತದ ನಡುವೆ ಪೈಪೋಟಿ ಏರ್ಪಡುವುದು ಖಚಿತ ಎನ್ನಲಾಗಿದೆ.

ಸುಖೋಯ್ ಎಸ್ ಯು-57 ಜೆಟ್ ವೈಮಾನಿಕ ಯುದ್ಧದ ಜೊತೆಗೆ ನೌಕಾ ಪಡೆಯ ಟಾರ್ಗೆಟ್ ಹಾಗೂ ಭೂಸೇನೆಯ ಟಾರ್ಗೆಟ್ ಗಳ ಮೇಲೂ ಆಕ್ರಮಣ ಮಾಡುವ ಸಮಾರ್ಥ್ಯ ಹೊಂದಿದ್ದು, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದನ್ನು ಜಗತ್ತಿನ ಅತ್ಯಂತ ಬಲಿಷ್ಠ ಯುದ್ಧ ವಿಮಾನ ಎಂದು ಹೇಳಿದ್ದರು. 

ರಷ್ಯಾದ ರಕ್ಷಣಾ ಕೈಗಾರಿಕಾ ಸಂಸ್ಥೆಯಲ್ಲಿನ ಅಂತಾರಾಷ್ಟ್ರೀಯ ಸಹಕಾರ ಹಾಗೂ ಪ್ರಾದೇಶಿಕ ನೀತಿ ವಿಭಾಗದ ನಿರ್ದೇಶಕ ವಿಕ್ಟರ್ ಕ್ಲಾಡೊವ್,  ಭಾರತ ಹಾಗೂ ಚೀನಾವನ್ನು ಸುಖೋಯ್ ಎಸ್ ಯು-57 ಜೆಟ್ ಗೆ  ಸಮರ್ಥ ಖರೀದಿದಾರರು ಎಂದು ಹೇಳಿದ್ದಾರೆ.