ಬ್ರಹ್ಮಪುತ್ರ ದತ್ತಾಂಶ ಹಂಚಿಕೆಗೆ ಮೋದಿ-ಕ್ಸಿ ಅಸ್ತು..!

news | Saturday, June 9th, 2018
Suvarna Web Desk
Highlights

ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ

ಎರಡು ಮಹತ್ವದ ಒಪ್ಪಂದಗಳಿಗೆ ಭಾರತ-ಚೀನಾ ಸಹಿ

ಪ್ರದಾನಿ ಮೋದಿ, ಅಧ್ಯಕ್ಷ ಜಿನ್ ಪಿಂಗ್ ಮಾತುಕತೆ

ಬ್ರಹ್ಮಪುತ್ರ ದತ್ತಾಂಶ ಹಂಚಿಕೆಗೆ ಅಸ್ತು

ಕಿಂಗ್ಡಾವೋ(ಜೂ.9): ಬ್ರಹ್ಮಪುತ್ರ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಒಪ್ಪಂದ ಸೇರಿದಂತೆ ಎರಡು ಪ್ರಮುಖ ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಸಹಿ ಹಾಕಿವೆ.

ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ(ಎಸ್ ಸಿಒ)ಯಲ್ಲಿ ಪಾಲ್ಗೊಳ್ಳಲು ಚೀನಾದ ಕ್ವಿಂಗ್ಡಾವೋಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಬ್ರಹ್ಮಪುತ್ರ ನದಿ ನೀರಿನ ದತ್ತಾಂಶ ಹಂಚಿಕೆ ಹಾಗೂ ಭಾರತದಿಂದ ಬಾಸುಮತಿಯೇತರ ಅಕ್ಕಿ ಆಮದು ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಿದರು.

ಹೊಸ ಒಪ್ಪಂದದ ಪ್ರಕಾರ, ಚೀನಾ ಬ್ರಹ್ಮಪುತ್ರ ನದಿಯಲ್ಲಿ ಮೇ 15ರಿಂದ ಅಕ್ಟೋಬರ್ 15ರ ಅವಧಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಲಿದೆ. ಇದರಿಂದ ಅಸ್ಸಾಂನಲ್ಲಿ ತಲೆದೋರುವ ಪ್ರವಾಹವನ್ನು ಎದುರಿಸಲು ಭಾರತವು ಅಗತ್ಯ ಕ್ರಮ ತೆಗೆದುಕೊಳ್ಳಲು ನೆರವಾಗಲಿದೆ.

ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಭಾಗವಾಗಿ ನಡೆದ ಚರ್ಚೆಯಲ್ಲಿ  ಭಯೋತ್ಪಾದನೆ, ಉಗ್ರಗಾಮಿತ್ವ ಹಾಗೂ ತೀವ್ರಗಾಮಿತ್ವದ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರ ಸೇರಿದಂತೆ ಅನೇಕ ಜಾಗತಿಕ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ಚರ್ಚೆ ನಡೆಸಿದ್ದಾರೆ. ವೂಹಾನ್ ಅನೌಪಚಾರಿಕ ಶೃಂಗಸಭೆಯಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಗೊಳಿಸುವಲ್ಲಿ ಮೋದಿ ಮತ್ತು ಕ್ಸಿ ಅವರು ಪ್ರಗತಿ ಸಾಧಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 

ಇದಕ್ಕೂ ಮೊದಲು ಮೋದಿ ಅವರೊಂದಿಗೆ ಎಸ್ ಸಿ ಓ ಪ್ರಧಾನ ಕಾರ್ಯದರ್ಶಿ ರಷೀದ್ ಅಲಿಮೊವ್ ಮಾತುಕತೆ ನಡೆಸಿದ್ದು, ಸಂಘಟನೆಗೆ ಸಂಬಂಧಿಸಿದಂತೆ ಭಾರತದ ಕಾರ್ಯಚಟುವಟಿಕೆ ಹಾಗೂ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  nikhil vk