ಡೋಕ್ಲಾಮ್ ಪ್ರದೇಶದಿಂದ ಸೇನೆಯನ್ನು ಚೀನಾ ವಾಪಸ್ ಕರೆಸಿಕೊಂಡು ಉಭಯ ದೇಶದ ನಡುವಿನ ಬಿಕ್ಕಟ್ಟು ಬಗೆಹರಿದಿದ್ದರೂ ಕೂಡಾ ಚೀನಾ ನಿಧಾನವಾಗಿ ಭಾರತದ ಪ್ರದೇಶಗಳನ್ನು ಕಬಳಿಸುತ್ತಿದೆ. ಭಾರತದ ಮಿತಿಯನ್ನು ಪರೀಕ್ಷಿಸುತ್ತಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ನವದೆಹಲಿ (ಸೆ.06): ಡೋಕ್ಲಾಮ್ ಪ್ರದೇಶದಿಂದ ಸೇನೆಯನ್ನು ಚೀನಾ ವಾಪಸ್ ಕರೆಸಿಕೊಂಡು ಉಭಯ ದೇಶದ ನಡುವಿನ ಬಿಕ್ಕಟ್ಟು ಬಗೆಹರಿದಿದ್ದರೂ ಕೂಡಾ ಚೀನಾ ನಿಧಾನವಾಗಿ ಭಾರತದ ಪ್ರದೇಶಗಳನ್ನು ಕಬಳಿಸುತ್ತಿದೆ. ಭಾರತದ ಮಿತಿಯನ್ನು ಪರೀಕ್ಷಿಸುತ್ತಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

ಚೀನಾ ತನ್ನ ಕಬಂಧ ಬಾಹುಗಳನ್ನು ಭಾರತದತ್ತ ಚಾಚಲು ಶುರು ಮಾಡಿದೆ. ನೆರೆಯ ಪಾಕಿಸ್ತಾನ ಪರಿಸ್ಥಿಯ ಲಾಭವನ್ನು ಪಡೆಯಲು ಯತ್ನಿಸುತ್ತಿದೆ. ಉತ್ತರ ಗಡಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಚೀನಾ ಮತ್ತು ಪಾಕಿಸ್ತಾನ ಉತ್ತರ ಮತ್ತು ಪಶ್ಚಿಮ ದಿಕ್ಕಿನ ಎದುರಾಳಿಗಳಾಗಿವೆ. ಇವೆರಡೂ ದೇಶಗಳ ಜೊತೆಗಿನ ಯುದ್ಧ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಎರಡು ಯುದ್ಧಗಳಿಗೆ ದೇಶ ತಯಾರಾಗುವ ಅಗತ್ಯವಿದೆ ಎಂದು ರಾವತ್ ಹೇಳಿದ್ದಾರೆ. ಚೀನಾ ಮತ್ತು ಪಾಕಿಸ್ತಾನ ಯಾವಾಗಲೂ ಬೆದರಿಕೆ ಇದೆ ಎಂದು ರಕ್ಷಣಾ ಸಚಿವಾಲಯ ಪುನರುಚ್ಚಿಸಿದೆ.