ಅಮೃತ್‌ಸರ್(ಮಾ.01): ವಿಂಗ್ ಕಮಾಂಡರ್ ಅಭಿನಂದನ್ ಹಸ್ತಾಂತರ ಪ್ರಕ್ರಿಯೆಯನ್ನು ಪಾಕಿಸ್ತಾನ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ವಾಘಾ ಗಡಿಯಲ್ಲಿ ನಿತ್ಯ ನಡೆಯುವ ಬೀಟಿಂಗ್ ರಿಟ್ರೀಟ್‌ನ್ನು ಭಾರತ ರದ್ದುಗೊಳಿಸಿದೆ.

ಬೀಟಿಂಗ್ ರಿಟ್ರೀಟ್ ನಂತರವಷ್ಟೇ ಆಭಿನಂದನ್ ಅವರನ್ನು ಹಸ್ತಾಂತರಿಸಲಾಗುವುದು ಎಂದು ಪಾಕ್ ಸ್ಪಷ್ಟಪಡಿಸಿದೆ. ಆದರೆ ವಾಘಾ ಗಡಿಯಲ್ಲಿ ಅಭಿನಂದನ್ ಅವರನ್ನು ಬರಮಾಡಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು, ಭದ್ರತೆಯ ಕಾರಣ ನೀಡಿ ಭಾರತ ಬೀಟಿಂಗ್ ರಿಟ್ರೀಟ್‌ನ್ನು ರದ್ದುಗೊಳಿಸಿದೆ.