ಕರುಣಾನಿಧಿ ಅಸ್ತಂಗತ, ಶ್ರೀರಾಮನ ಬಗ್ಗೆ ನೀಡಿದ್ದ ಹೇಳಿಕೆ ಶಾಶ್ವತ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 12:03 AM IST
India can not forget DMK Chief M Karunanidhi saying on Sri Rama
Highlights

ಕರುಣಾನಿಧಿ ಅಸ್ತಂಗತರಾಗಿದ್ದಾರೆ. ಆದರೆ ಅವರು ನೀಡಿದ್ದ ಹೇಳಿಕೆ ಇನ್ನು ಹಾಗೆ ಇದೆ. ಹೌದು ಸಂದರ್ಭವೊಂದರಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಬಗ್ಗೆ ಮಾತನಾಡಿದ್ದ ಕರುಣಾನಿಧಿ ಇಡೀ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ವೇಳೆಯೇ ಶ್ರೀರಾಮ ಒಬ್ಬ ಕುಡುಕ ಎಂಬ ವಿವಾದಾತ್ಮಕ ಹೇಳಿಕೆಯನ್ನು ಕರುಣಾನಿಧಿ ನೀಡಿದ್ದರು. ಜತೆಗೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಸವಾಲು ಹಾಕಿ ರಾಮಾಯಣ ಮತ್ತು ರಾಮ ಸೇತು ಬಗ್ಗೆ  ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದರು.

ಕಾವೇರಿ, ವೀರಪ್ಪನ್, ಸರ್ವಜ್ಞ, ಕರ್ನಾಟಕ ಮತ್ತು ಕರುಣಾನಿಧಿ

2007ರ ಈ ಘಟನೆಯನ್ನು ಯಾರು ಮರೆತಿರಲಿಕ್ಕಿಲ್ಲ. ಕರುಣಾನಿಧಿ ನಿಧನದ ವೇಳೆ ಮತ್ತೆ ಇದು ನೆನಪಾಗಿದೆ. ವಾಲ್ಮೀಕಿ ರಾಮಾಯಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿಕೊಂಡು ಅಡ್ವಾಣಿ ವಾದಕ್ಕೆ ಬರಲಿ ಎಂದು ಕರುಣಾನಿಧಿ ಹೇಳಿದ್ದರು. ಅಲ್ಲದೇ ರಾಮಸೇತು ವಿಚಾರದಲ್ಲಿಯೂ ಯಾವುದೇ ಸ್ಪಷ್ಟ ನಿಲುವು ಕರುಣಾನಿಧಿ ಬಳಿ ಇರಲಿಲ್ಲ.

loader