ನವದೆಹಲಿ(ಜೂ.09): ಶಾಂಘೈ ಸಹಕಾರ ಸಂಘಟನೆ(SCO) ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದು, ಈ ವೇಳೆ ಮೋದಿ ಪ್ರಯಾಣಿಸುವ ವಿಮಾನಕ್ಕೆ ತನ್ನ ವಾಯು ಪ್ರದೇಶ ಮುಕ್ತಗೊಳಿಸುವಂತೆ ಪಾಕಿಸ್ತಾನವನ್ನು ಭಾರತ ಕೇಳಿಕೊಂಡಿದೆ.

ಬಾಲಾಕೋಟ್ ವಾಯುದಾಳಿ ಬಳಿಕ ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಸೀಲ್ ಮಾಡಿದ್ದು, ಕೇವಲ ಎರಡು ಮಾರ್ಗಗಳಿಗೆ ಮಾತ್ರ ಭಾರತದ ವಿಮಾನಗಳಿಗೆ ಅವಕಾಶ ಕಲ್ಪಿಸಿದೆ.

ಪ್ರಧಾನಿ ಮೋದಿ ಕಿರ್ಗಿಸ್ತಾನ್ ಭೇಟಿ ವೇಳೆ ಪಾಕಿಸ್ತಾನ ಇನ್ನೂ ತೆರಯದ ವಾಯು ಪ್ರದೇಶದಲ್ಲಿ ವಿಮಾನ ಸಾಗಬೇಕಿದ್ದು, ಈ ಹಿನ್ನೆಲೆಯಲ್ಲಿ ಮೋದಿ ವಿಮಾನ ಸಂಚರಿಸಲು ಅವಕಾಶ ನೀಡಬೇಕೆಂದು ಭಾರತ ಮನವಿ ಮಾಡಿದೆ.