ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸಿ, ಅದಕ್ಕೆ ಭಾರತ ಪ್ರತಿಕ್ರಿಯೆ ನೀಡಿದಾಗ ತಪ್ಪು ಎಣಿಕೆಯಿಂದ ಪರಮಾಣು ಯುದ್ಧ ನಡೆಯಬಹುದು. ಪಾಕಿಸ್ತಾನ ಮೂಲದ ಭಯೋತ್ಪಾದಕರು ಭಾರತ ಕೇಂದ್ರಿತ ದಾಳಿಗಳನ್ನು ನಡೆಸುತ್ತಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಚಿಂತೆ ಭಾರತಕ್ಕಿದೆ.

ವಾಷಿಂಗ್ಟನ್(ಮಾ.11): ಭಾರತ ಹಾಗೂ ಪಾಕಿಸ್ತಾನ ನಡುವೆ ನಿರಂತರ ತ್ವೇಷಮಯ ಪರಿಸ್ಥಿತಿ ಇದ್ದು, ತಪ್ಪು ಎಣಿಕೆಯಿಂದಾಗಿ ಎರಡೂ ದೇಶಗಳ ನಡುವೆ ಅಣ್ವಸ ಸಮರ ನಡೆಯಬಹುದು ಎಂದು ಅಮೆರಿಕದ ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ದಾಳಿ ನಡೆಸಿ, ಅದಕ್ಕೆ ಭಾರತ ಪ್ರತಿಕ್ರಿಯೆ ನೀಡಿದಾಗ ತಪ್ಪು ಎಣಿಕೆಯಿಂದ ಪರಮಾಣು ಯುದ್ಧ ನಡೆಯಬಹುದು. ಪಾಕಿಸ್ತಾನ ಮೂಲದ ಭಯೋತ್ಪಾದಕರು ಭಾರತ ಕೇಂದ್ರಿತ ದಾಳಿಗಳನ್ನು ನಡೆಸುತ್ತಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಚಿಂತೆ ಭಾರತಕ್ಕಿದೆ. ತನ್ನ ಭೂಭಾಗದಲ್ಲಿರುವ ಭಯೋತ್ಪಾದಕರನ್ನು ಮಟ್ಟ ಹಾಕಲು ವರ್ಷಾರಂಭದಲ್ಲಿ ಸೇನೆಯನ್ನೂ ಬಳಕೆ ಮಾಡಿಕೊಂಡಿದೆ ಎಂದು ಸಂಸತ್ತಿನ ಸಶಸ ಸೇವೆಗಳ ಸಮಿತಿ ಎದುರು ಅಮೆರಿಕದ ಕೇಂದ್ರೀಯ ಕಮಾಂಡ್‌ನ ಕಮಾಂಡರ್ ಆಗಿರುವ ಜನರಲ್ ಜೋಸ್'ಫ್ ವೊಟೆಲ್ ಅವರು ಹೇಳಿಕೆ ನೀಡಿದ್ದಾರೆ. ಭಯೋತ್ಪಾದಕರೆಂದು ಅಮೆರಿಕ ಘೋಷಣೆ ಮಾಡಿರುವ 20 ವ್ಯಕ್ತಿಗಳಲ್ಲಿ ಏಳು ಮಂದಿ ಪಾಕಿಸ್ತಾನದಲ್ಲೇ ಇದ್ದಾರೆ ಎಂದಿದ್ದಾರೆ.