ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ದಕ್ಷಿಣ ಭಾರತದಾದ್ಯಂತ ನಡೆಯುತ್ತಿರುವ  ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಈಗ ಮತ್ತಷ್ಟು ಬಲ ಸಿಕ್ಕಿದೆ. ರಾಜ್ಯದ ವಿವಿಧ ಸಾರಿಗೆ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಪೆಟ್ರೋಲ್​ ಹಾಗೂ ಗ್ಯಾಸ್​ ಸರಬರಾಜು ಸಂಪೂರ್ಣ ಸ್ಥಗಿತಗೊಳುವ ಸಾಧ್ಯತೆ ಇದೆ.

ಬೆಂಗಳೂರು (ಮಾ.31): ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ದಕ್ಷಿಣ ಭಾರತದಾದ್ಯಂತ ನಡೆಯುತ್ತಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಈಗ ಮತ್ತಷ್ಟು ಬಲ ಸಿಕ್ಕಿದೆ. ರಾಜ್ಯದ ವಿವಿಧ ಸಾರಿಗೆ ಸಂಘಟನೆಗಳು ಈ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಪೆಟ್ರೋಲ್​ ಹಾಗೂ ಗ್ಯಾಸ್​ ಸರಬರಾಜು ಸಂಪೂರ್ಣ ಸ್ಥಗಿತಗೊಳುವ ಸಾಧ್ಯತೆ ಇದೆ.

ಕಳೆದ ದಿನಗಳಿಂದ ಥರ್ಡ್ ಪಾರ್ಟಿ ಪ್ರೀಮಿಯಂ ದರ ಏರಿಕೆ ಹಾಗೂ 19 ರಾಜ್ಯ ಹೆದ್ದಾರಿಗಳಲ್ಲಿ ಟೋಲ್​​ ಸಂಗ್ರಹಣೆ ವಿರುದ್ಧ , ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಲಾರಿ ಮಾಲೀಕರಿಗೆ ಈಗ ಆನೆ ಬಲ ಬಂದಿದೆ. ಸೋಮವಾದಿಂದ ಲಾರಿ ಮಾಲೀಕರ ಮುಷ್ಕರ ಮತ್ತಷ್ಟು ತೀವ್ರಗೊಳಲ್ಲಿದೆ. ಕರ್ನಾಟಕ , ತಮಿಳುನಾಡು, ಆಂಧ್ರಪ್ರದೇಶ,ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಟೂರಿಸ್ಟ್​ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್​ , ಗ್ಯಾಸ್​, ಪೆಟ್ರೋಲ್ ಟ್ಯಾಂಕರ್​ಗಳ ಮಾಲೀಕರು ಲಾರಿ ಮುಷ್ಕರಕ್ಕೆ ಸಾಥ್​ ನೀಡಿದು, ಪೆಟ್ರೋಲ್​ , ಗ್ಯಾಸ್​ ಸರಬರಾಜು ಸ್ಥಗಿತಗೊಳ್ಳುವ ಎಲ್ಲಾ ಸಾದ್ಯತೆಗಳಿವೆ.

ಇಂದು ನಗರದ ಪ್ರೆಸ್​ ಕ್ಲಬ್​ ನಲ್ಲಿ ಸುದ್ದಿಗೋಷ್ಠಿ ನಡೆಸಿದ ದಕ್ಷಿಣ ವಲಯ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ, ಇದೇ ಸೋಮವಾದಿಂದ ತಮ್ಮ ಹೋರಾಟ ಹಾದಿಯನ್ನ ತೀವ್ರ ಸ್ವರೂಪಕ್ಕೆ ತರುವುದಾಗಿ ಸರ್ಕಾರಕ್ಕೆ ಎಚ್ಚರಿಕ್ಕೆ ನೀಡಿದ್ದು. ಥರ್ಡ್ ಪಾರ್ಟಿ ಪ್ರೀಮಿಯಂ ದರ ಏರಿಕೆ ರದ್ದು, 15 ವರ್ಷದ ಹಳೇ ವಾಹನ ರದ್ದುಗೊಳಿಸುವ ಚಿಂತನೆಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಲಿಖಿತ ಆದೇಶ ನೀಡುವವರೆಗೂ ಮುಷ್ಕರ ಮುಂದುವರಿಸುವುದಾಗಿ ಜಿ.ಆರ್.ಷಣ್ಮುಗಪ್ಪ ತಿಳಿಸಿದ್ದಾರೆ