ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಒಳ್ಳೆಯದೇ ಆಗಿದೆ. ಈ ಲೋಕಸಭಾ ಉಪ ಚುನಾವಣೆಯಲ್ಲಿ ನಿಲ್ಲದೆ ಹೋಗಿದ್ದರೇ, ಜೀವನದಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೆ ಎಂದಿದ್ದಾರೆ, ಪರಾಭವಗೊಂಡ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ. 

'ಸದ್ಯ ದೇಶದ ಪಂಚರಾಜ್ಯಗಳಾದ ರಾಜಸ್ಥಾನ, ಮಧ್ಯ ಪ್ರದೇಶ, ಚತ್ತೀಸ್‌ಗಢ, ಮಿಜೋರಾಂ, ತೆಲಂಗಾಣದಲ್ಲಿ ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 7 ರಂದು ಚುನಾವಣೆ ಮುಕ್ತಾಯವಾಗುತ್ತಿದ್ದು,  ಚುನಾವಣೆ ನಂತರ ಬಿಜೆಪಿ ಇನ್ನೂ ಥಂಡಾ ಹೊಡೆಯಲಿದೆ. ದೇಶದಲ್ಲಿ ಮೋದಿ ಅಲೆ ಇಲ್ಲ, ದಕ್ಷಿಣ ಭಾರತದಲ್ಲಂತೂ ಇಲ್ಲವೇ ಇಲ್ಲ,' ಎಂದು ಮಧು ಬಂಗಾರಪ್ಪವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಇನ್ನೇನು ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ನಾನೇ ಆಭ್ಯರ್ಥಿ ಎಂದೇನೂ ಘೋಷಿಸಿಲ್ಲ. ಆದರೆ, ಆಭ್ಯರ್ಥಿಯಾಗುವ ಆಕಾಂಕ್ಷೆ ಇದೆ,' ತಮ್ಮ ಇಂಗಿತವನ್ನು ಮಧು ವ್ಯಕ್ತಪಡಿಸಿದ್ದಾರೆ. 

ಬಿಜೆಪಿಗೆ ಭರ್ಜರಿ ಫೈಟ್ ಕೊಟ್ಟು ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಧು ಬಂಗಾರಪ್ಪಗೆ ಎಂಎಲ್‌ಸಿ ಸ್ಥಾನ ಅಥವಾ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ಡಲಾಗುತ್ತದೆ ಎನ್ನುವ ಬಗ್ಗೆಯೂ ಸುದ್ದಿಯಾಗಿತ್ತು. ಆದರೆ ತಮಗೆ ಎಂಎಲ್‌ಸಿ ಸ್ಥಾನ ಬೇಡವೆಂದು ಖುದ್ದು ಮಧು ದೇವೇಗೌಡರ ಬಳಿ ಹೇಳಿದ್ದಾರೆನ್ನಲಾಗಿದೆ. 

'ಯಡಿಯೂರಪ್ಪ ಇನ್ನೆಂದಿಗೂ ಸಿಎಂ ಆಗಲ್ಲ'