‘‘ಆರ್ಥಿಕ ಬೆಳವಣಿಗೆ ತ್ವರಿತಗೊಳಿಸುವುದೊಂದೇ ಇಂದಿನ ಆದ್ಯತೆಯಲ್ಲ. ಅಭಿವೃದ್ಧಿ, ಒಳಗೊಳ್ಳುವಿಕೆ, ಉದ್ಯೋಗ ಸೃಷ್ಟಿ, ಪರಿಸರ ಸಂರಕ್ಷಣೆ ಮುಂತಾದ ಬಹು ಆಯಾಮದ ಅಂಶಗಳ ಅಗತ್ಯವಿದೆ’’- ಮನಮೋಹನ್ ಸಿಂಗ್

ನವದೆಹಲಿ(ನ.26): ದೇಶದ ಜಿಡಿಪಿ ಶೇ. 7ರಿಂದ ಶೇ. 7.5ರ ಪ್ರಮಾಣದಲ್ಲಿ ಏರಿಕೆಯಾಗಬೇಕಾದರೆ, ಹೂಡಿಕೆಯಲ್ಲಿ ಗಮನಾರ್ಹ ಏರಿಕೆಯ ಅಗತ್ಯವಿದೆ. ಅದರಲ್ಲೂ ಮುಖ್ಯವಾಗಿ ಮೂಲಭೂತ ಸೌಕರ್ಯಗಳು ಮತ್ತು ವಿದೇಶಿ ಉದ್ಯಮದ ಪುನರುಜ್ಜೀವನ ನಡೆಯಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.

ಪಿಎಚ್‌ಡಿ ವಾಣಿಜ್ಯ ಮಂಡಳಿಯ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು 'ಆರ್ಥಿಕ ನೀತಿಗಳನ್ನು ಹೇಗೆ ವಿನ್ಯಾಸಗೊಳಿಸಬೇಕೆಂದರೆ, ಸಾರ್ವಜನಿಕ ಹಣಕಾಸು ವ್ಯವಸ್ಥೆಯನ್ನು ಪುನರ್ವಿತರಣೆಗೊಳಿಸುವ ಅಥವಾ ಅಭಿವೃದ್ಧಿ ಪ್ರಕ್ರಿಯೆಯನ್ನು ಹಾಳುಗೆಡವುವ ರೀತಿಯಲ್ಲಿರಕೂಡದು' ಎಂದು ಅವರು ಹೇಳಿದ್ದಾರೆ.

‘‘ಆರ್ಥಿಕ ಬೆಳವಣಿಗೆ ತ್ವರಿತಗೊಳಿಸುವುದೊಂದೇ ಇಂದಿನ ಆದ್ಯತೆಯಲ್ಲ. ಅಭಿವೃದ್ಧಿ, ಒಳಗೊಳ್ಳುವಿಕೆ, ಉದ್ಯೋಗ ಸೃಷ್ಟಿ, ಪರಿಸರ ಸಂರಕ್ಷಣೆ ಮುಂತಾದ ಬಹು ಆಯಾಮದ ಅಂಶಗಳ ಅಗತ್ಯವಿದೆ’’ ಎಂದು ಸಿಂಗ್ ಹೇಳಿದ್ದಾರೆ.