ಜಯಾ ಟಿವಿಯನ್ನು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆರಂಭಿಸಿದ್ದರು. ಜಯಲಲಿತಾ ಮರಣ ನಂತರ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಕುಟುಂಬವರುವರು ಮುನ್ನಡೆಸುತ್ತಿದ್ದರು.
ಚೆನ್ನೈ(ನ.09): ಇಂದು ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ಜಯಾ ಟಿವಿ ಕಚೇರಿ ಮೇಲೆ ದಾಳಿ ನಡೆಸಿ ಶಾಕ್ ಮುಟ್ಟಿಸಿದ್ದಾರೆ.
ಸುಮಾರು 10 ಅಧಿಕಾರಿಗಳನ್ನೊಳಗೊಂಡ ಐಟಿ ತೆರಿಗೆ ತಂಡವು ಚೆನ್ನೈನ ಜಯಾ ಟಿವಿ ಮೇಲೆ ದಾಳಿ ನಡೆಸಿದ್ದಾರೆ.
ತೆರಿಗೆ ವಂಚನೆ ಹಾಗೂ ಅಕ್ರಮ ಆದಾಯದ ಕುರಿತಂತೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವುದುದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಕರುಣಾನಿಧಿ ಭೇಟಿ ಬೆನ್ನಲ್ಲೇ ಜಯಾ ಟಿವಿ ಮೇಲೆ ದಾಳಿ ನಡೆದಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಜಯಾ ಟಿವಿಯನ್ನು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆರಂಭಿಸಿದ್ದರು. ಜಯಲಲಿತಾ ಮರಣ ನಂತರ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಕುಟುಂಬವರುವರು ಮುನ್ನಡೆಸುತ್ತಿದ್ದರು.