ಮೇ 10ರ ವರೆಗೆ ಈ ಯೋಜನೆಯಡಿ ಕಪ್ಪು ಹಣ ಹೊಂದಿರುವವರು ತಮ್ಮ ವಿವರ ಘೋಷಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಇದರ ಗಡುವು ಏಪ್ರಿಲ್ 30ಕ್ಕೆ ಮುಗಿಯಬೇಕಿತ್ತು.
ನವದೆಹಲಿ(ಏ.21): ಕಪ್ಪುಹಣದಾರರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ(ಪಿಎಂಜಿಕೆವೈ)ಯಡಿ ತೆರಿಗೆ ಪಾವತಿ ಮತ್ತು ಠೇವಣಿಗಳ ವಿವರ ಘೋಷಣೆ ಗಡುವನ್ನು 10 ದಿನ ವಿಸ್ತರಿಸಿದೆ.
ಮೇ 10ರ ವರೆಗೆ ಈ ಯೋಜನೆಯಡಿ ಕಪ್ಪು ಹಣ ಹೊಂದಿರುವವರು ತಮ್ಮ ವಿವರ ಘೋಷಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈವರೆಗೆ ಇದರ ಗಡುವು ಏಪ್ರಿಲ್ 30ಕ್ಕೆ ಮುಗಿಯಬೇಕಿತ್ತು.
‘ಪಿಎಂಜಿಕೆವೈಯಡಿ ಆದಾಯ ವಿವರ ಘೋಷಿಸುವವರಿಗೆ ಸಿಬಿಡಿಟಿ ಮೇ 10ರ ವರೆಗೆ ಅವಕಾಶ ನೀಡಿ ದಿನಾಂಕ ವಿಸ್ತರಿಸಿದೆ. ಮಾ. 31ರೊಳಗೆ ತೆರಿಗೆ, ದಂಡ ಮತ್ತು ಹೆಚ್ಚುವರಿ ತೆರಿಗೆ ಪಾವತಿಸಿರುವ ಮತ್ತು ಠೇವಣಿ ಯೋಜನೆಯಡಿ ಏ. 30ರೊಳಗೆ ಠೇವಣಿಯಿರಿಸಿರುವ ಪ್ರಕರಣಗಳಿಗೆ ಇದು ಅನ್ವಯವಾಗುತ್ತದೆ’ ಎಂದು ಅಕೃತ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.