ಬೆಂಗಳೂರು[ಮಾ. 05]   ಅಡಿಶನಲ್ ಕಮಾಂಡೆಟ್ ಜನರಲ್, ಹೋಮ್ ಗಾರ್ಡ್ಸ್ ಮತ್ತು ನಾಗರಿಕ ಭದ್ರತೆ ಇಲಾಖೆ ಹೆಚ್ಚುವರಿ ನೀರ್ದೇಶಕಿಯಾಗಿದ್ದ ಡಿ. ರೂಪಾ ಅವರನ್ನು ಬೆಂಗಳೂರು ರೈಲ್ವೆ ಪೊಲೀಸ್ ವಿಭಾಗದ ಐಜಿಪಿಯಾಗಿ ವರ್ಗಾವಣೆ  ಮಾಡಲಾಗಿದೆ.

ಮೈಸೂರು ವಿಭಾಗದ  ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿದ್ದ ಎನ್. ವಿಷ್ಣುವರ್ಧನ ಅವರನ್ನು ಮೈಸೂರು ದಕ್ಷಿಣ ವಿಭಾಗ ಭ್ರಷ್ಟಾಚಾರ ನಿಗ್ರಹ ದಳದ ಎಸ್ ಪಿಯಾಗಿ ವರ್ಗಾವಣೆ ಮಾಡಲಾಗಿದೆ.

17 ಐಎಎಸ್,33 ಐಪಿಎಸ್‌ ವರ್ಗಾವಣೆ ಹಿಂದಿದೆ ಅಸಲಿ ಕಾರಣ!

ಫೆಬ್ರವರಿ ಅಂತ್ಯದ ವೇಳೆ 48 ಗಂಟೆಗಳ ಅವಧಿಯಲ್ಲಿ ರಾಜ್ಯ ಸರಕಾರ 17 ಐಎಎಸ್, 33 ಐಪಿಎಸ್, ಒಬ್ಬರು ಕೆಎಎಸ್ ಅಧಿಕಾರಿಗಳ ಸ್ಥಾನ ಪಲ್ಲಟ ಮಾಡಿತ್ತು. ಲೋಕ ಸಮರ ಹತ್ತಿರವಾಗುತ್ತಿರುವ ಕಾರಣಕ್ಕೆ ವರ್ಗಾವಣೆ ಜೋರಾಗಿ ನಡೆಯುತ್ತಿದೆ ಎಂಬ ಮಾತು ಕೇಳಿ ಬಂದಿದೆ.