Asianet Suvarna News Asianet Suvarna News

ಅಮ್ಮಾ ಕ್ಯಾಂಟೀನ್ ರೀತಿ ಅನ್ನಪೂರ್ಣ ಭೋಜನಾಲಯ

ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಅಗತ್ಯ ಆಹಾರ ಒದಗಿಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗುತ್ತಿ ಎಂದು ಸಿಎಂ ಕಚೇರಿ ಗುರುವಾರ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.

In Yogi Adityanaths Uttar Pradesh Annapurna Bhojanalya to offer

ಲಖನೌ(ಮೇ.23): ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಉದ್ದೇಶದಿಂದ ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ಉತ್ತರ ಪ್ರದೇಶದಾದ್ಯಂತ ‘ಅನ್ನಪೂರ್ಣ ಭೋಜನಾಲಯ’ಗಳನ್ನು ತೆರೆಯಲು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಅಗತ್ಯ ಆಹಾರ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿ ಎಂದು ಸಿಎಂ ಕಚೇರಿ ಗುರುವಾರ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ. ಹೊಟ್ಟೆ ಹಸಿದವರಿಗೆ ಅನ್ನಪೂರ್ಣ ಭೋಜನಾಲಯಗಳು ಅನಿಯಮಿತ ಆಹಾರ ನೀಡಲಿವೆ. ಭೋಜನಾಲಯಗಳಲ್ಲಿ ಗಂಜಿ, ಚಹಾ, ಅನ್ನ ಸಾಂಬರ್‌ಗೆ 3 ರುಪಾಯಿ ಇರಲಿದ್ದು, ರೋಟಿ, ದಾಲ್ ಮತ್ತು ಅನ್ನದ ಊಟಕ್ಕೆ 5 ರುಪಾಯಿ ದರ ವಿಧಿಸಲು ನಿರ್ಧರಿಸಲಾಗಿದೆ.

Latest Videos
Follow Us:
Download App:
  • android
  • ios