ಪ್ರಧಾನಿ ಮೋದಿ ಡಿಮಾನಿಟೈಸೇಶನ್ ನಂತರ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ಹಣ ಬಂದಿದ್ದು, ಇದೀಗ ಅನಾಮಧೇಯ/ಬೇನಾಮಿ ಕಂಪನಿಗಳು ಕಂಪನಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ತೆರಿಗೆ ಕಟ್ಟದೇ ಕೂಡಿಟ್ಟ ಅಕ್ರಮ ಹಣವನ್ನು ಬಾಂಕುಗಳಿಗೆ ಡಿಪಾಸಿಟ್ ಮಾಡಿ ಎಂದು ಸೂಚಿಸಿದ್ದಾರೆ.
ನವದೆಹಲಿ (ಆ.16): ಪ್ರಧಾನಿ ಮೋದಿ ಡಿಮಾನಿಟೈಸೇಶನ್ ನಂತರ ಸರ್ಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೇ ಹಣ ಬಂದಿದ್ದು, ಇದೀಗ ಅನಾಮಧೇಯ/ಬೇನಾಮಿ ಕಂಪನಿಗಳು ಕಂಪನಿಗಳಿಗೆ ಚುರುಕು ಮುಟ್ಟಿಸಿದ್ದಾರೆ. ತೆರಿಗೆ ಕಟ್ಟದೇ ಕೂಡಿಟ್ಟ ಅಕ್ರಮ ಹಣವನ್ನು ಬಾಂಕುಗಳಿಗೆ ಡಿಪಾಸಿಟ್ ಮಾಡಿ ಎಂದು ಸೂಚಿಸಿದ್ದಾರೆ.
ಡಿಮಾನಿಟೈಸೇಶನ್ ಬಳಿಕ ಇಂತಹ ಕಪಟ ಕಂಪನಿಗಳು ಸರ್ಕಾರದ ಕಣ್ಣಿಗೆ ಮಣ್ಣೆರಚಿ ಅಕ್ರಮ ಆಸ್ತಿಯನ್ನು ಮಾಡಿಕೊಂಡಿರುವ ಬಗ್ಗೆ ಸರ್ಕಾರಕ್ಕೆ ಇದುವರೆಗೂ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ಇಂತಹ ಕಪಟ ಕಂಪನಿಗಳ ಬಗ್ಗೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ ಹಾಗೂ ತೆರಿಗೆ ಅಧಿಕಾರಿಗಳ ತಂಡವನ್ನು ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳು ರಚಿಸಿದ್ದಾರೆ.
ಕಳೆದ ತಿಂಗಳು ಸುಮಾರು 2 ಲಕ್ಷ ಈ ರೀತಿಯ (ಶೆಲ್) ಕಂಪನಿಗಳನ್ನು ಮುಚ್ಚಲು ಅಧಿಕಾರಿಗಳು ಆದೇಶ ನೀಡಿದ್ದರು. ಇನ್ನೂ ನೂರಾರು ಕಂಪನಿಗಳ ಮೇಲ ಸರ್ಕಾರ ಕಣ್ಣಿಟ್ಟಿದೆ.
ನಿನ್ನೆ ಸ್ವತಂತ್ರ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ನಾವು ಕಪ್ಪು ಹಣದ ವಿರುದ್ಧ ಸಮರ ಸಾರಿದ್ದೇವೆ. ದೇಶವನ್ನು ಲೂಟಿ ಹೊಡೆಯುವವರಿಗೆ ಸರಿಯಾದ ಪಾಠ ಕಲಿಸುತ್ತೇವೆ ಎಂದು ಒತ್ತಿ ಹೇಳಿದ್ದರು.
