ಸಾಮಾನ್ಯವಾಗಿ ಗರ್ಭಿಣಿಯರಿಗೆ ಆಕೆಯ ಗಂಡ, ತವರು ಮನೆ ಬಂಧುಗಳು ಸೀಮಂತ ಕಾರ್ಯ ಮಾಡ್ತಾರೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ  ಸರ್ಕಾರಿ ಅಧಿಕಾರಿಗಳು ಸೀಮಂತ ಕಾರ್ಯ ಮಾಡಿ ಗೌರವಿಸಿದ್ದಾರೆ. ಮನೆಯವರಿಗೆ ಬದಲಾಗಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಯಾಕೆ ಸೀಮಂತ ಮಾಡಿದರು. ಅವರು ಮಾಡಿರುವ ಒಳ್ಳೆ ಕೆಲಸವಾದರೂ ಏನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ದಾವಣಗೆರೆ(ಆ.11): ಸಾಮಾನ್ಯವಾಗಿ ಗರ್ಭಿಣಿಯರಿಗೆ ಆಕೆಯ ಗಂಡ, ತವರು ಮನೆ ಬಂಧುಗಳು ಸೀಮಂತ ಕಾರ್ಯ ಮಾಡ್ತಾರೆ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಸರ್ಕಾರಿ ಅಧಿಕಾರಿಗಳು ಸೀಮಂತ ಕಾರ್ಯ ಮಾಡಿ ಗೌರವಿಸಿದ್ದಾರೆ. ಮನೆಯವರಿಗೆ ಬದಲಾಗಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಯಾಕೆ ಸೀಮಂತ ಮಾಡಿದರು. ಅವರು ಮಾಡಿರುವ ಒಳ್ಳೆ ಕೆಲಸವಾದರೂ ಏನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ದಾವಣಗೆರೆ ಜಿಲ್ಲೆಯ ಕೈದಾಳೆ ಗ್ರಾಮದ ಕೋಲುಕುಂಟೆ ಹಳ್ಳಿಯಲ್ಲಿ ಗರ್ಭಿಣಿಯರ ಮನೆಗಳಲ್ಲಿ ಶೌಚಾಲಯವಿಲ್ಲದೇ ಬರ್ಹಿದೆಸೆಗೆ ಹೋಗುವಂತಹ ಪರಿಸ್ಥಿತಿಯಿತ್ತು. ಆಗ ಜಿಲ್ಲಾ ಪಂಚಾಯತ್ ಸಿಇಓ ಸಿ.ಎಸ್.ಅಶ್ವತಿ ಗರ್ಭಿಣಿಯರ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡರೆ ಅವರಿಗೆ ಸೀಮಂತದ ಉಡುಗೊರೆ ನೀಡುವುದಾಗಿ ಆದೇಶ ಹೊರಡಿಸಿದ್ದರು. ಅದರಂತೆ ಕೋಲುಕುಂಟೆಯ ಸಾವಿತ್ರಮ್ಮ ಮತ್ತು ಚೈತ್ರಾಗೆ ಸರ್ಕಾರ ಕೊಡುವ 15 ಸಾವಿರ ಅನುದಾನದಲ್ಲಿ ಶೌಚಾಲಯ ನಿರ್ಮಿಸಿ ಬಯಲು ಶೌಚಕ್ಕೆ ಕೊನೆಯಾಡಿದ್ದಾರೆ.

ಈಗಾಗಲೇ ಸ್ಥಳೀಯ ಅಧಿಕಾರಿಗಳು 1500ಕ್ಕೂ ಹೆಚ್ಚು ಗರ್ಭಿಣಿಯರನ್ನು ಗುರುತಿಸಿದ್ದು ಯಾರ್ಯಾರ ಮನೆಯಲ್ಲಿ ಶೌಚಾಲಯವಿಲ್ಲ ಎಂಬುದರ ಅಂಕಿ ಅಂಶ ಸಂಗ್ರಹಿಸಿದ್ದಾರೆ. ಪಿಡಿಓ ಮಟ್ಟದ ಅಧಿಕಾರಿಗಳು ಗರ್ಭಿಣಿಯರ ಮನೆ ಬಾಗಿಲಿಗೆ ಹೋಗಿ ಶೌಚಾಲಯ ಕೊಠಡಿಗಳನ್ನು ನಿರ್ಮಿಸಲು ಮನವೊಲಿಸಿ ಈ ವಿಶೇಷ ಸೀಮಂತ ಪುರಸ್ಕಾರವನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. 

ಒಟ್ನಲ್ಲಿ ಬಯಲು ಶೌಚಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಮುಂದಾಗಿರುವ ಜಿಲ್ಲಾಡಳಿತ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಕ್ರಾಂತಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇಡೀ ಜಿಲ್ಲೆಯನ್ನು ಬಯಲು ಶೌಚ ಮುಕ್ತಗೊಳಿಸಲು ಜಿಲ್ಲಾ ಪಂಚಾಯತ್ ಹೊಸ ವಿಧಾನದಲ್ಲಿ ಸಾರ್ವಜನಿಕರ ಮನವೊಲಿಸುತ್ತಿದೆ.