Asianet Suvarna News Asianet Suvarna News

ಶಬರಿಮಲೆ: ಹಿಂದೆ ಹೆಂಗಿತ್ತೋ ಹಂಗೆ ಇರ್ಲಿ ಎಂದಿದ್ದ ಮಹಿಳಾ ನ್ಯಾಯಾಧೀಶೆ!

ಶಬರಿಮಲೆ ದೇಗುಲದಲ್ಲಿ ಮಹಿಳೆಯರಿಗೆ ಪ್ರವೇಶ! ಸುಪ್ರೀಂ ಕೋರ್ಟ್ ನಿಂದ ಐತಿಹಾಸಿಕ ತೀರ್ಪು! ತೀರ್ಪು ವಿರೋಧಿಸಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿ! ಸುಪ್ರೀಂ ತೀರ್ಪಿನ ವಿರುದ್ಧ ಅಭಿಪ್ರಾಯ ಹೊಂದಿದ್ದ ಇಂದೂ ಮಲ್ಹೋತ್ರಾ! ಇಂದೂ ಮಲ್ಹೋತ್ರಾ ಪಂಚ ಸದಸ್ಯ ಪೀಠ ಸದಸ್ಯ ನ್ಯಾಯಮೂರ್ತಿ 

In Sabarimala verdict why Justice Indu Malhotra Dissented the Judgement
Author
Bengaluru, First Published Sep 29, 2018, 2:02 PM IST

ನವದೆಹಲಿ(ಸೆ.29): ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಹಿಳೆಯರ ಪ್ರವೇಶ ಕುರಿತಂತೆ ನಿನ್ನೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೂ ದೇಗಲುದಲ್ಲಿ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಪಂಚ ಸದಸ್ಯ ಪೀಠ ಐತಿಹಾಸಿಕ ತೀರ್ಪು ನೀಡಿತ್ತು.

In Sabarimala verdict why Justice Indu Malhotra Dissented the Judgement

ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಈ ತೀರ್ಪನ್ನು 4-1 ಬಲದ ಮುಖಾಂತರ ಆದೇಶಿಸಿತ್ತು. ನಾಲ್ವರು ನ್ಯಾಯಮೂರ್ತಿಗಳು ಶಬರಿಮಲೆಯಲ್ಲಿ ಮಹಿಳೆಯರಿಗೆ ಪ್ರವೇಶದ ಪರವಾಗಿದ್ದರೆ ಒಬ್ಬರು ನ್ಯಾಯಮೂರ್ತಿ ಮಾತ್ರ ಈ ತೀರ್ಪಿನ ವಿರುದ್ಧ ಧ್ವನಿ ಎತ್ತಿದ್ದರು. ಅವರ ಹೆಸರು ಇಂದೂ ಮಲ್ಹೋತ್ರಾ.

ಹೌದು, ನಿನ್ನೆಯ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅಭಿಪ್ರಾಯ ಹೊಂದಿದ್ದ ಏಕೈಕ ನ್ಯಾಯಾಧೀಶೆ ಇಂದೂ ಮಲ್ಹೋತ್ರಾ. ‘ದೇಶದ ಜಾತ್ಯತೀತ ವಾತಾವರಣವನ್ನು ನಿಭಾಯಿಸುವ ಕಾರಣ ಮುಂದಿರಿಸಿಕೊಂಡು ಆಳವಾದ ಧಾರ್ಮಿಕ ತಳಹದಿಯನ್ನು ಹೊಂದಿರುವ ವಿಚಾರಗಳನ್ನು ಬದಲಿಸಬಾರದು’ ಎಂದು ಹೇಳುವ ಮೂಲಕ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವುದನ್ನು ಅವರು ವಿರೋಧಿಸಿದ್ದರು.

‘ಸಮಾನತೆಯ ಹಕ್ಕು ಬೇರೆ. ಸ್ವಾಮಿ ಅಯ್ಯಪ್ಪನ ಪೂಜಿಸುವ ಹಕ್ಕು ಬೇರೆ. ಮಹಿಳಾ ಪ್ರವೇಶ ವಿವಾದವು ಕೇವಲ ಶಬರಿಮಲೆಗೆ ಅಷ್ಟೇ ಸೀಮಿತವಲ್ಲ. ಇತರ ಧಾರ್ಮಿಕ ಸ್ಥಳಗಳಲ್ಲಿನ ಆಚರಣೆಯ ಮೇಲೂ ಇದು ಪ್ರಭಾವ ಬೀರಲಿದೆ’ ಎಂದು ಎಚ್ಚರಿಕೆ ನೀಡಿದ ಅವರು, ‘ತರ್ಕದ ವಿಚಾರಗಳನ್ನು ಧಾರ್ಮಿಕ ವಿಷಯಗಳಿಗೆ ಎಳೆದು ತರಲಾಗದು ಎಂದು ಅಭಿಪ್ರಾಯಪಟ್ಟಿದ್ದರು. 

‘ಭಾರತದಲ್ಲಿ ವಿವಿಧ ಧಾರ್ಮಿಕ ಆಚರಣೆಗಳಿವೆ. ಸಾಂವಿಧಾನಿಕ ನೈತಿಕತೆಯು ಅವರವರ ನಂಬಿಕೆಯ ಅನುಸಾರ ಧಾರ್ಮಿಕ ಆಚರಣೆಗೆ ಅನುವು ಮಾಡಿಕೊಡುತ್ತದೆ. ಸಮಾನತೆಯ ಬೋಧನೆಯು ಧಾರ್ಮಿಕ ಆಚರಣೆಯ ಹಕ್ಕು ಒದಗಿಸುವ ಪರಿಚ್ಛೇದ 25ನ್ನು ಮೆಟ್ಟಿನಿಲ್ಲಲು ಆಗದು’ ಎಂದು ಅವರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.

 ‘ದೇಶದ ಜಾತ್ಯತೀತ ವಾತಾವರಣವನ್ನು ನಿಭಾಯಿಸುವ ಕಾರಣ ಮುಂದಿರಿಸಿಕೊಂಡು ಆಳವಾದ ಧಾರ್ಮಿಕ ತಳಹದಿಯನ್ನು ಹೊಂದಿರುವ ವಿಚಾರಗಳನ್ನು ಬದಲಿಸಬಾರದು’-ಇಂದೂ ಮಲ್ಹೋತ್ರಾ

‘ಸಮಾನತೆಯ ಹಕ್ಕು ಬೇರೆ. ಸ್ವಾಮಿ ಅಯ್ಯಪ್ಪನ ಪೂಜಿಸುವ ಹಕ್ಕು ಬೇರೆ. ಮಹಿಳಾ ಪ್ರವೇಶ ವಿವಾದವು ಕೇವಲ ಶಬರಿಮಲೆಗೆ ಅಷ್ಟೇ ಸೀಮಿತವಲ್ಲ. ಇತರ ಧಾರ್ಮಿಕ ಸ್ಥಳಗಳಲ್ಲಿನ ಆಚರಣೆಯ ಮೇಲೂ ಇದು ಪ್ರಭಾವ ಬೀರಲಿದೆ’-ಇಂದೂ ಮಲ್ಹೋತ್ರಾ
 

Follow Us:
Download App:
  • android
  • ios