23ಕ್ಕಿಂತ ಕಡಿಮೆ ಪ್ರಾಯದ ಯುವಕರಿಗೆ ಸಾರಾಯಿ ಮಾರಾಟ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ತಿರುವನಂತಪುರಂ(ಡಿ.06): ಕೇರಳದಲ್ಲಿ ಮದ್ಯ ಸೇವಿಸುವವರ ಕನಿಷ್ಠ ಪ್ರಾಯ 21ರಿಂದ 23ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ವಿಧೇಯಕವನ್ನು ತರಲು ಕೇರಳ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. 23ಕ್ಕಿಂತ ಕಡಿಮೆ ಪ್ರಾಯದ ಯುವಕರಿಗೆ ಸಾರಾಯಿ ಮಾರಾಟ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಈ ಸಂಬಂಧ ಕೇರಳ ಅಬಕಾರಿ ಕಾಯ್ದೆ ಮತ್ತು ವಿದೇಶಿ ಮದ್ಯ ನೀತಿಗೆ ತಿದ್ದುಪಡಿ ತರಬೇಕಾಗಿದೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತು ಸರ್ಕಾರ ವಿಶೇಷ ಮಸೂದೆ ಮಂಡಿಸಲಿದೆ. ಅತಿ ಹೆಚ್ಚು ಆಲ್ಕೋಹಾಲ್ ಸೇವನೆ ಮಾಡುವವರಿರುವ ರಾಜ್ಯಗಳಲ್ಲಿ ಕೇರಳ ಕೂಡ ಒಂದು.