ಅಮರಾವತಿ (ಜೂ.19) :  ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಮ್ಮ ರಾಜ್ಯದ  ಪೊಲೀಸರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸಾವಿರಾರು ಪೊಲೀಸರಿಗೆ ಜಗನ್ ಅನೇಕ ಸಮಯದಿಂದ ಬಾಕಿ ಉಳಿದಿದ್ದ ವಾರದ ರಜೆ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ.

ಈ ವ್ಯವಸ್ಥೆ ಆಂಧ್ರ ಪ್ರದೇಶದ ಎಲ್ಲಾ ಪೇದೆಗಳು ಹಾಗೂ ಇನ್ಸ್ ಪೆಕ್ಟರ್ ಗಳಿಗೂ ಅನ್ವಯವಾಗುತ್ತದೆ.  ಅಲ್ಲದೇ ಇನ್ನುಮುಂದೆ ಎಲ್ಲರೂ ಕೂಡ ರಜೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ. 

ನೂತನ ವಾರದ ರಜೆ ಸೌಲಭ್ಯದ ಅನುಕೂಲತೆಯನ್ನು ಆಂಧ್ರ ಪ್ರದೇಶದ ಪೊಲೀಸ್ ಇಲಾಖೆಯ ಒಟ್ಟು 67 ಸಾವಿರ ಸಿಬ್ಬಂದಿ ಪಡೆದುಕೊಳ್ಳಲಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಜಗನ್ ಮೋಹನ್ ರೆಡ್ಡಿ ಅನೆಕ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೆ ತರುತ್ತಿದ್ದು, ಎಲ್ಲಾ ವರ್ಗದ ಜನತೆಗೆ ಅನುಕೂಲಕರವಾದ ಆಡಳಿತ ನೀಡುತ್ತಿದ್ದಾರೆ. ಈ ಸಾಲಿಗೆ ಇದೀಗ ಪೊಲೀಸ್ ರಜೆ ವ್ಯವಸ್ಥೆಯೂ ಕೂಡ ಸೇರಿದಂತಾಗಿದೆ.