ಹೌದು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿ.ಕೆ. ಶಶಿಕಲಾ, ಅವರ ಬಂಧುಗಳಾದ ಇಳವರಸಿ ಹಾಗೂ ಸುಧಾಕರನ್‌ಗೆ ಸುಪ್ರೀಂಕೋರ್ಟ್ 4 ವರ್ಷ ಜೈಲು ಶಿಕ್ಷೆ ವಿಸಿ ಮಂಗಳವಾರ ತೀರ್ಪು ನೀಡಿದೆ. ತಕ್ಷಣವೇ ಜೈಲಿಗೆ ಹೋಗುವಂತೆ ಸೂಚಿಸಿದೆ. ಒಂದು ವೇಳೆ ಜಯಲಲಿತಾ ಜೀವಂತವಾಗಿದ್ದರೆ, ಅವರಿಗೂ ಇದೇ ರೀತಿ ಶಿಕ್ಷೆಯಾಗುತ್ತಿತ್ತು ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

ನವದೆಹಲಿ(ಫೆ.14): ಎರಡು ತಿಂಗಳ ಹಿಂದೆ ನಿಧನ ಹೊಂದಿದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಈಗ ಏನಾದರೂ ಬದುಕಿದ್ದರೆ ಅವರಿಗೂ 4 ವರ್ಷ ಜೈಲು ಶಿಕ್ಷೆಯಾಗುತ್ತಿತ್ತು!

ಹೌದು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ವಿ.ಕೆ. ಶಶಿಕಲಾ, ಅವರ ಬಂಧುಗಳಾದ ಇಳವರಸಿ ಹಾಗೂ ಸುಧಾಕರನ್‌ಗೆ ಸುಪ್ರೀಂಕೋರ್ಟ್ 4 ವರ್ಷ ಜೈಲು ಶಿಕ್ಷೆ ವಿಸಿ ಮಂಗಳವಾರ ತೀರ್ಪು ನೀಡಿದೆ. ತಕ್ಷಣವೇ ಜೈಲಿಗೆ ಹೋಗುವಂತೆ ಸೂಚಿಸಿದೆ. ಒಂದು ವೇಳೆ ಜಯಲಲಿತಾ ಜೀವಂತವಾಗಿದ್ದರೆ, ಅವರಿಗೂ ಇದೇ ರೀತಿ ಶಿಕ್ಷೆಯಾಗುತ್ತಿತ್ತು ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರೇ ಆರೋಪಿ ನಂ.1 ಆಗಿದ್ದರು. ಅವರು ದೋಷಿಯಾಗದೇ, ಉಳಿದವರನ್ನು ದೋಷಿ ಎಂದು ಹೇಳಲು ಬರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜಯಾ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣವನ್ನು ಸುಪ್ರೀಂಕೋರ್ಟ್ ಕೈಬಿಟ್ಟಿದೆ.