Asianet Suvarna News Asianet Suvarna News

Monkey Revenge : ಮಂಗನ ಸೇಡು ಕಂಡು ಜನರಿಗೆ ಮಹಾ ಅಚ್ಚರಿ!

ತನ್ನ ಮರಿಯನ್ನು ಸಾಯಿಸಿದ್ದಕ್ಕೆ ಮಂಗಗಳ ಸೇಡು
250 ನಾಯಿಮರಿಗಳನ್ನು ಸಾಯಿಸಿರುವ ಕೋತಿಗಳು
ಮಹಾರಾಷ್ಟ್ರದ ಭೀಡ್ ಜಿಲ್ಲೆಯಲ್ಲಿ ನಡೆದ ಘಟನೆ

In Beed district Of maharashtra Monkeys kill 250 puppy to take revenge after dog kills baby monkey san
Author
Mumbai, First Published Dec 18, 2021, 7:53 PM IST

ಮುಂಬೈ (ಡಿ. 18): ಮನುಷ್ಯ ಮಾತ್ರವಲ್ಲ, ಪ್ರಾಣಿಗಳಿಗೂ ಕೋಪ, ತಾಪ ಬರುತ್ತದೆ ಎನ್ನುವುದಕ್ಕೆ ಸಾಷ್ಟು ನಿದರ್ಶನಗಳಿವೆ. ಅದರಲ್ಲಿ ಸೇಡು ತೀರಿಸಿಕೊಳ್ಳುವ ಗುಣವೂ ಒಂದು. ಮಹಾರಾಷ್ಟ್ರದ (Maharashtra) ಭೀಡ್ (Beed ) ಜಿಲ್ಲೆಯಲ್ಲಿ ನಾಯಿ (Dog ) ಹಾಗೂ ಕೋತಿಗಳ ನಡುವೆ ನಡೆದಿರುವ ಈ ಘಟನೆ ಸ್ಥಳೀಯ ಜನರಲ್ಲೂ ಅಚ್ಚರಿಗೆ ಕಾರಣವಾಗಿದೆ. ತನ್ನ ಮರಿಯನ್ನು ಸಾಯಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಇಳಿದಿರುವ ಕೋತಿಗಳ (Monkeys) ಗುಂಪು, ತನ್ನ ಪ್ರದೇಶದಲ್ಲಿ ಸಿಕ್ಕ ಸಿಕ್ಕ ನಾಯಿಮರಿಗಳನ್ನು ಎತ್ತರದ ಪ್ರದೇಶದಿಂದ ಕೆಳಗೆ ಎಸೆದಿರುವ ಘಟನೆ ನಡೆದಿದೆ. ಇದರ ಪರಿಣಾಮವಾಗಿ ಕಳೆದ ಒಂದು ತಿಂಗಳಿನಲ್ಲಿ 250 ನಾಯಿಮರಿಗಳು ಸಾವಿಗೆ ಈಡಾಗಿದೆ ಎಂದರೆ ಅಚ್ಚರಿಯಾಗದೇ ಇರದು.

ಭೀಡ್ ಜಿಲ್ಲೆಯ ಮಜಲಗಾಂವ್ (Majalgaon ) ತಾಲೂಕಿನ ಲಾವೂಲ್ (Lavool ) ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು, ಒಂದು ತಿಂಗಳ ಹಿಂದೆ ಕೆಲವು ಬೀದಿನಾಯಿಗಳು ಮಂಗನ ಮರಿಯನ್ನು ತಿಂದು ಸಾಯಿಸಿದ್ದವು. ಇದರ ಸೇಡು ತೀರಿಸಿಕೊಳ್ಳಲು ಮುಂದಾದ ಕೋತಿಗಳು ಗುಂಪು ಕಣ್ಣಿಗೆ ಸಿಕ್ಕ ನಾಯಿಮರಿಗಳನ್ನು ದೊಡ್ಡ ಕಟ್ಟಡಗಳು, ಮರಗಳನ್ನೇರಿ ನೆಲಕ್ಕೆ ಎತ್ತಿ ಹಾಕುತ್ತಿದ್ದವು. ಮಜಲಗಾಂವ್ ನಿಂದ 10 ಕಿಲೋಮೀಟರ್ ನಡೆದರೆ ಸಿಗುವ, ಅಂದಾಜು 5 ಸಾವಿರ ಜನಸಂಖ್ಯೆಯ ಲಾವೂಲ್ ಗ್ರಾಮದಲ್ಲಿ ಪ್ರಸ್ತುತ ಒಂದೇ ಒಂದು ನಾಯಿ ಮರಿಗಳು ರಸ್ತೆಯಲ್ಲಿ ಕಾಣುತ್ತಿಲ್ಲ. ಈ ಕುರಿತಾಗಿ ಸ್ಥಳೀಯ ನಾಗರೀಕರು ಅರಣ್ಯ ಇಲಾಖೆಯ (Forest Department) ಸಿಬ್ಬಂದಿಗೆ ದೂರು ನೀಡಿದ್ದು, ಸೇಡಿನ ಗುರಿಯಲ್ಲಿರುವ ಕೋತಿಗಳನ್ನು ಹಿಡಿಯುವಂತೆ ಮನವಿ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದರೂ, ಈವರೆಗೂ ಒಂದೇ ಒಂದು ಕೋತಿಯನ್ನು ಹಿಡಿಯಲು ಸಾಧ್ಯವಾಗಿಲ್ಲ.

ನಾಯಿಮರಿಯನ್ನು ರಸ್ತೆಯಲ್ಲಿ ಕಂಡಾಗ ಒಂದು ಗುಂಪಿನಲ್ಲಿ ಬರುವ ಕೋತಿಗಳು, ನಾಯಿ ಮರಿಯನ್ನು ಹಿಡಿದುಕೊಂಡು ಓಡಲು ಆರಂಭಿಸುತ್ತದೆ. ಸಾಕಷ್ಟು ಎತ್ತರಕ್ಕೆ ಏರಿದ ಬಳಿಕ, ನಾಯಿಮರಿಗಳನ್ನು ಕೆಳಗೆ ಹಾಕುತ್ತವೆ. ಇದರಿಂದಾಗಿ ಕನಿಷ್ಠ 250 ನಾಯಿಮರಿಗಳು ಕಳೆದ ಒಂದು ತಿಂಗಳಲ್ಲಿ ಸಾವಿಗೀಡಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ವಿಫಲ ಪ್ರಯತ್ನದ ಬಳಿಕ, ಕೆಲವು ಗ್ರಾಮವಾಸಿಗಳು ನಾಯಿಮರಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಪಟ್ಟಿದ್ದಾರೆ. ಆದರೆ, ಕೋತಿಗಳು ಅವರ ಮೇಲೂ ದಾಳಿ ಮಾಡಿದ್ದು, ಕೆಲವು ಮಂದಿ ಗಾಯಗೊಂಡು ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಕಟ್ಟಡದ ಮೇಲೆ ಹತ್ತಿ ನಾಯಿ ಮರಿಗಳನ್ನು ರಕ್ಷಣೆ ಮಾಡುವ ಪ್ರಯತ್ನದಲ್ಲಿ ಕೆಲವೊಬ್ಬರು ಮೇಲಿನಿಂದ ಬಿದ್ದು ಗಾಯಗೊಂಡಿದ್ದಾರೆ.  

'ಗಂಡು ಮಂಗಗಳಿಗೆ ಸಂತಾನ ಹರಣ ಮಾಡ್ತಿರೋ..ಹೆಣ್ಣು ಮಂಗಗಳಿಗೋ'
ಇನ್ನು ಶಾಲೆಗೆ ಹೋಗುವ ಮಕ್ಕಳು ಹಾಗೂ ರಸ್ತೆಯಲ್ಲಿ ತಿರುಗಾಡುವ ಪುಟ್ಟ ಮಕ್ಕಳನ್ನೂ ಗುರಿಯಾಗಿಸಿಕೊಂಡು ಕೋತಿಗಳು ದಾಳಿ ಮಾಡುತ್ತಿದ್ದು, ಸ್ಥಳೀಯ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಂಗಗಳು ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದೆ. ಅದರ ಸೇಡು ತೀರುವವರೆಗೂ ಇದೇ ರೀತಿ ಮಾಡುತ್ತಿರುತ್ತದೆ. ಮಂಗನ ಮರಿಯನ್ನು ಸಾಯಿಸಿದ ಬಳಿಕ ಇವೆಲ್ಲವೂ ಆರಂಭವಾಗಿದೆ. ಊರಿನ ಯಾವುದೇ ಮರ ಅಥವಾ ಎತ್ತರದ ಕಟ್ಟಡದ ಬಳಿ ಹೋದರೂ ನಾಯಿ ಮರಿಗಳು ಸತ್ತ ದೃಶ್ಯಗಳು ಕಾಣಬಹುದು ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

viral video:ಟ್ರಿಮ್‌ ಆಗಲು ಸಲೂನ್‌ಗೆ ತೆರಳುವ ಮಂಗ
ಕಳೆದ ಸೆಪ್ಟೆಂಬರ್ ನಲ್ಲಿ (September)ಇದೇ ರೀತಿಯ ಘಟನೆ ಕರ್ನಾಟಕದಲ್ಲಿ (Karnataka) ವರದಿಯಾಗಿತ್ತು.  ಚಿಕ್ಕಮಗಳೂರಿನ (Chikkamagalur ) ಕೊಟ್ಟಿಗೆಹಾರ (Kottigehara )ಗ್ರಾಮದಲ್ಲಿ, ಸ್ಥಳೀಯ ಜನರ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಕೋತಿಗಳು 22 ಕಿಲೋಮೀಟರ್ ಪ್ರಯಾಣ ಬೆಳೆಸಿದ್ದವು. ಶಾಲಾ ಆವರಣದಲ್ಲಿ ಓಡಾಡುತ್ತಿದ್ದ ಮಂಗಳಗನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿತ್ತು. ಮೂರು ಗಂಟೆಯ ಅವಧಿಯಲ್ಲಿ 30 ಸಿಬ್ಬಂದಿಗಳು ಕೋತಿಗಳನ್ನು ಹಿಡಿದು 22 ಕಿಲೋಮೀಟರ್ ದೂರದ ಬಾಳೂರು ಅರಣ್ಯದಲ್ಲಿ ಬಿಡಲಾಗಿತ್ತು. ಆದರೆ, ರಸ್ತೆಯಲ್ಲಿ ಹೋಗುತ್ತಿದ್ದ ಟ್ರಕ್ ನ ಮೇಲೇರಿದ ಮಂಗಗಳು, ಒಂದು ವಾರದ ಒಳಗಾಗಿ ಮತ್ತೆ ಗ್ರಾಮಕ್ಕೆ ಬಂದು ಸಮಸ್ಯೆ ನೀಡಿದ್ದವು. 2ನೇ ಬಾರಿ ಮಂಗಗಳನ್ನು ಹಿಡಿದ ಅರಣ್ಯದ ಆಳದಲ್ಲಿ ಬಿಡಲಾಗಿತ್ತು.

Follow Us:
Download App:
  • android
  • ios