Asianet Suvarna News Asianet Suvarna News

'ಗಂಡು ಮಂಗಗಳಿಗೆ ಸಂತಾನ ಹರಣ ಮಾಡ್ತಿರೋ..ಹೆಣ್ಣು ಮಂಗಗಳಿಗೋ'

ವಿಧಾನ ಸಭೆ ಕಲಾಪ/ ಅರಣ್ಯ ಇಲಾಖೆ ವಿರುದ್ಧ ಶಾಸಕ ಅರಗಜ್ಞಾನೇಂದ್ರ ಆಕ್ರೋಶ/ ಮಂಗಗಳ ಹಾವಳಿಯಿಂದ ರೈತರ ಬೆಳೆ ನಾಶವಾಗ್ತಿದೆ/ ಮಂಗಗಳ ಹಾವಳಿ ಹೇಗೆ ತಪ್ಪಿಸುತ್ತೀರಾ ಅಂತಾ ಪ್ರಶ್ನೆ ಕೇಳಿದರೆ ಉದ್ಧಟತನದ ಉತ್ತರ ಕೊಡ್ತಾರೆ/ ಸಂತಾನ ಹರಣ ಗಂಡು ಮಂಗಗಳಿಗೆ ಮಾಡ್ತಿರೋ ಹೆಣ್ಣು ಮಂಗಗಳಿಗೆ ಮಾಡ್ತಿರೋ ಎಂದು ವ್ಯಂಗ್ಯವಾಡಿದ ಶಾಸಕ ಅರಗಜ್ಞಾನೇಂದ್ರ.. 

What action has been taken by the government to stop the monkeys questions MLA araga jnanendra mah
Author
Bengaluru, First Published Mar 18, 2021, 2:51 PM IST

ಬೆಂಗಳೂರು(ಮಾ. 18) ವಿಧಾನಸಭೆ ಕಲಾಪದಲ್ಲಿ ಅರಣ್ಯ ಇಲಾಖೆ ವಿರುದ್ಧ  ತೀರ್ಥಹಳ್ಳಿ ಶಾಸಕ ಅರಗಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಗಳ ಹಾವಳಿಯಿಂದ ರೈತರ ಬೆಳೆ ನಾಶವಾಗ್ತಿದೆ. ಮಂಗಗಳ ಹಾವಳಿ ಹೇಗೆ ತಪ್ಪಿಸುತ್ತೀರಾ ಅಂತಾ ಪ್ರಶ್ನೆ ಕೇಳಿದರೆ ಉದ್ಧಟತನದ ಉತ್ತರ ಕೊಡ್ತಾರೆ. ಮಂಗಗಳ ಸಂತಾನ ಹರಣ ಮಾಡ್ತೇವೆ ಅಂತಾ ಉತ್ತರ ಕೊಟ್ಟಿದ್ದಾರೆ. ಸಂತಾನ ಹರಣ ಗಂಡು ಮಂಗಗಳಿಗೆ ಮಾಡ್ತಿರೋ ಹೆಣ್ಣು ಮಂಗಗಳಿಗೆ ಮಾಡ್ತಿರೋ ಎಂದು ವ್ಯಂಗ್ಯವಾಡಿದ್ದಾರೆ.

ಮಂಕಿ ಪಾರ್ಕ್‌ ಗೆ ಮಲೆನಾಡಿಗರಿಂದಲೇ ವಿರೋಧ

ಮಂಗಗಳ ಹಾವಳಿಗೆ ರೈತರಿಗೆ ಪರಿಹಾರ ನೀಡುವ ಬಗ್ಗೆ ಉತ್ತರಿಸಬೇಕಾಗಿತ್ತು. ಮಂಕಿ ಪಾರ್ಕ್ ಮಾಡುವ ಭರವಸೆ ಸಿಎಂ ನೀಡಿದ್ದರು. ಆರು ಕೋಟಿ ಹಣ ಕೂಡ ಬಿಡುಗಡೆ ಮಾಡಿದ್ರು. ಆದ್ರೆ ಇನ್ನೂ ಪಾರ್ಕ್ ನಿರ್ಮಾಣ ಆಗಲಿಲ್ಲ. ಒಂದೂವರೆ ವರ್ಷದಿಂದ ಯೋಜನೆ ಜಾರಿಯಾಗಿಲ್ಲ. ಈಗ ಕೇಳಿದ್ರೆ ವರ್ಷಕ್ಕೆ 25 ಲಕ್ಷ ಖರ್ಚು ಮಾಡಿ ಸಂತಾನ ಹರಣ ಮಾಡ್ತೇವೆ ಅಂತಾ ಅರಣ್ಯ ಇಲಾಖೆ ಹೇಳ್ತಿದೆ. ಏನು ನಡೆಯುತ್ತಿದೆ ಎಂದು ಕೇಳಿದರು.

ಅರಣ್ಯ ಸಚಿವರ ಪರ ಸಚಿವ ಜಗದೀಶ್ ಶೆಟ್ಟರ್ ಉತ್ತರ ನೀಡಿ, ಗಂಡು ಮಂಗಗಳಿಗೆ ಸಂತಾನ ಹರಣ ಮಾಡಲಾಗುವುದು. ಅದರ ಜೊತೆಗೆ ಮಂಕಿ ಪಾರ್ಕ್ ಕೂಡ ಮಾಡ್ತೇವೆ. ಸಿಎಂ ಜೊತೆ ಮಾತನಾಡಿ ಕ್ರಮ‌ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

Follow Us:
Download App:
  • android
  • ios