ಇಟಾನಗರ್‌:  ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕೆಲ ರಾಜ್ಯಗಳಲ್ಲಿಯೂ ಕೂಡ ಚುನಾವಣೆ ನಡೆಯಲಿದೆ. ಇನ್ನು ವಿಧಾನಸಭೆ ಚುನಾವಣೆಗೆ ಒಂದು ಕ್ಷೇತ್ರಕ್ಕೆ ಕನಿಷ್ಠವೆಂದರೂ 10ರಿಂದ 15 ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ.

ತೀರಾ ಅಪರೂಪ ಎಂಬಂತೆ ಅರುಣಾಲ ಪ್ರದೇಶದಲ್ಲಿ ಏ.11ರಂದು ಚುನಾವಣೆ ನಿಗದಿಯಾಗಿರುವ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಆಲೋ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಕೆಂಟೊ ಜಿನಿ ಮತ್ತು ಯಾಚುಲಿ ಕ್ಷೇತ್ರದ ತಾಬಾ ತೆದಿರ್‌ ಅವರ ವಿರುದ್ಧ ಯಾವುದೇ ನಾಮಪತ್ರ ಸಲ್ಲಿಕೆ ಆಗಿಲ್ಲ. ಅರುಣಾಚಲ ಪ್ರದೇಶದ 60 ವಿಧಾನಸಭಾ ಕ್ಷೇತ್ರಗಳಿಗೆ ಲೋಕಸಭೆಯ ಜೊತೆಗೆ ಏ.11ರಂದು ಚುನಾವಣೆ ನಿಗದಿಯಾಗಿದೆ.