ನವದೆಹಲಿ[ಜ.10]: ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಸೇನಾ ದಿನದ ಪರೇಡ್ ನಲ್ಲಿ ಮಹಿಳಾ ಅಧಿಕಾರಿಯೊಬ್ಬರು ಸೇನಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ 2015ರ ಗಣರಾಜ್ಯೋತ್ಸವದಂದು ಇಬ್ಬರು ಮಹಿಳಾ ಅಧಿಕಾರಿಗಳು 148 ಸಿಬ್ಬಂದಿಯುಳ್ಳ ಪರೇಡ್‌ ನ ಮುಂದಾಳತ್ವ ವಹಿಸಿದ್ದರು. ಆದರೆ ಸೇನಾ ದಿನದಂದು ಮಹಿಳಾ ಅಧಿಕಾರಿರಯೊಬ್ಬರು ಮುಂದಾಳತ್ವ ವಹಿಸುತ್ತಿರುವುದು ಇದೇ ಮೊದಲು.

ಲೆಫ್ಟಿನೆಂಟ್‌ ಭಾವನ ಕಸ್ತೂರಿ 2018 ರ ಜನವರಿ 15 ರಂದು ನಡೆಯಲಿರುವ 71ನೇ ಸೇನಾ ದಿನದಂದು 144 ಸೈನಿಕರಿರುವ ಭಾರತೀಯ ಸೇನಾ ಸೇವಾ ಕಾರ್ಪ್ಸ್ ನ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಬರೋಬ್ಬರಿ ಎರಡು ದಶಕಗಳ ನಂತರ ಎಎಸ್‌ಸಿ ಈ ಪರೇಡ್‌ನಲ್ಲಿ ಭಾಗವಹಿಸುತ್ತಿರುವುದರಿಂದ ಇದು ಭಾವನರವರ ಪಾಲಿಗೆ ವಿಶೇಷ ಸಂದರ್ಭವಾಗಿದೆ. ಇನ್ನು ಪರೇಡ್‌ನಲ್ಲಿ ಭಾಗವಹಿಸಲು ಅವರು 6 ತಿಂಗಳು ಅಭ್ಯಾಸ ನಡೆಸಿದ್ದಾರಂತೆ. 

ಭಾವನಾರವರು ತಮಗೆ ಈ ಅವಕಾಶ ನೀಡಿದ ಭಾರತೀಯ ಸೇನೆಯ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ, ಇದು ಭಾರತೀಯ ಸೇನೆಯಲ್ಲಿ ಆಗುತ್ತಿರುವ ಅಭಿವೃದ್ಧಿ ಹಾಗೂ ಬದಲಾವಣೆಯ ಸಂಕೇತ ಎಂದಿದ್ದಾರೆ. ಅಲ್ಲದೇ ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅಧಿಕಾರಿಗಳ ಅಂಗೀಕಾರವಾಗಬೇಕು ಎಂದು ಆಗ್ರಹಿಸಿದ್ದಾರೆ. 

1949ರ ಜನವರಿಯಲ್ಲಿ ಭಾರತದ ಕಮಾಂಡರ್‌ ಇನ್‌ ಚೀಫ್‌ ಆಗಿ ಜನರಲ್‌ ಲೆಫ್ಟಿನೆಂಟ್‌ ಜನರಲ್‌ ಕೆಎಂ ಕಾರ್ಯಪ್ಪ ಅಧಿಕಾರ ಪಡೆದಿದ್ದರು. ಅಂದಿನಿಂದ ಸ್ಮರಣಾರ್ಥವಾಗಿ ಜನವರಿ 15ನ್ನು ಭಾರತೀಯ ಸೇನಾ ದಿನವನ್ನಾಗಿ  ಆಚರಿಸಲಾಗುತ್ತದೆ. ಸೇನಾ ದಿನದಂದು ಭಾರದ ದೇಶದ ಭದ್ರತೆ ಮತ್ತು ನಾಗರಿಕರ ರಕ್ಷಣೆಗಾಘಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ.