ಪ್ರಧಾನಿ ನರೇಂದ್ರ ಮೋದಿ 2017 ರ ಕಡೆಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ಇಂದು ನಡೆಸಿಕೊಟ್ಟರು. ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 'ನವ ಭಾರತ' ನಿರ್ಮಾಣದ ಬಗ್ಗೆ ಒತ್ತಿ ಹೇಳುತ್ತಾ, ಪಾಸಿಟೀವ್ ಇಂಡಿಯಾದಿಂದ ಪ್ರೋಗ್ರೆಸಿವ್ ಇಂಡಿಯಾ ನಿರ್ಮಾಣ ಮಾಡುವತ್ತ ದೇಶದ ಜನರಿಗೆ ಕರೆ ನೀಡಿದರು.
ನವದೆಹಲಿ (ಡಿ.31): ಪ್ರಧಾನಿ ನರೇಂದ್ರ ಮೋದಿ 2017 ರ ಕಡೆಯ ಮನ್ ಕಿ ಬಾತ್ ಕಾರ್ಯಕ್ರಮವನ್ನು ಇಂದು ನಡೆಸಿಕೊಟ್ಟರು. ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 'ನವ ಭಾರತ' ನಿರ್ಮಾಣದ ಬಗ್ಗೆ ಒತ್ತಿ ಹೇಳುತ್ತಾ, ಪಾಸಿಟೀವ್ ಇಂಡಿಯಾದಿಂದ ಪ್ರೋಗ್ರೆಸಿವ್ ಇಂಡಿಯಾ ನಿರ್ಮಾಣ ಮಾಡುವತ್ತ ದೇಶದ ಜನರಿಗೆ ಕರೆ ನೀಡಿದರು.
ಕ್ರಿಸ್'ಮಸ್ ಹಾಗೂ ಹೊಸವರ್ಷಕ್ಕೆ ಶುಭಾಶಯ ಕೋರುತ್ತಾ, ಕಾರ್ಯಕ್ರಮವನ್ನು ಶುರು ಮಾಡಿದರು. ಜ. 01 ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವವರಿಗೆ ವಿಶೇಷವಾದ ಸಂದೇಶವನ್ನು ನೀಡಿದರು.
ನವ ಭಾರತವನ್ನು ನಾವೆಲ್ಲಾ ಒಟ್ಟಾಗಿ ಸೇರಿ ನಿರ್ಮಾಣ ಮಾಡೋಣ. ಪಾಸಿಟೀವ್ ಇಂಡಿಯಾದಿಂದ ಪ್ರೋಗ್ರೆಸಿವ್ ಇಂಡಿಯಾದತ್ತ ಸಾಗುತ್ತಾ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಮೋದಿ ಮನ್ ಕಿ ಬಾತ್'ನಲ್ಲಿ ಹೇಳಿದರು.
ನರೇಂದ್ರ ಮೋದಿ ಆಯಪ್ ಅಥವಾ MYGov ಪೋರ್ಟಲ್'ನಲ್ಲಿ ಪಾಸಿಟೀವ್ ಸ್ಟೋರಿಗಳನ್ನು ಹಂಚಿಕೊಳ್ಳುವಂತೆ ಜನರನ್ನು ಕೇಳಿಕೊಂಡರು.
