ಎಲ್ಲಾ ವ್ಯವಹಾರಗಳಲ್ಲಿ  ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಿರುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುತ್ತದೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಹಿನ್ನಲೆಯಲ್ಲಿ ನಾಗರೀಕರ ಮಾಹಿತಿಯನ್ನು ಟ್ರಾಕ್ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

 ನವದೆಹಲಿ (ಆ.01): ಎಲ್ಲಾ ವ್ಯವಹಾರಗಳಲ್ಲಿ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಿರುವುದರಿಂದ ಖಾಸಗಿ ಮಾಹಿತಿ ಸೋರಿಕೆಯಾಗುತ್ತದೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಹಿನ್ನಲೆಯಲ್ಲಿ ನಾಗರೀಕರ ಮಾಹಿತಿಯನ್ನು ಟ್ರಾಕ್ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಆಧಾರ್ ಕಾರ್ಡ್’ನ ಮಾಹಿತಿ ಸೋರಿಕೆಯಾಗದಂತೆ ರಕ್ಷಣೆ ಮಾಡಲಾಗಿದೆ. ಒಂದು ವೇಳೇ ನ್ಯಾಯಾಲಯ ಅನುಮತಿ ನೀಡಿದರೂ ಕೂಡಾ ಸರ್ಕಾರ ನಾಗರೀಕರ ಮೇಲೆ ಕಣ್ಣಿಡಲು ಅವರ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಯುಐಡಿಎಐ ಹೇಳಿದೆ.

ಖಾಸಗಿ ಮಾಹಿತಿಯನ್ನು ಮೂಲಭೂತ ಹಕ್ಕು ಎಂದು ಪರಿಗಣಿಸುವುದಾದರೆ ಇಂದಿನ ಆನ್’ಲೈನ್ ಯುಗದಲ್ಲಿ ಯಾವುದೂ ಖಾಸಗಿಯಾಗಿ ಉಳಿದಿಲ್ಲ ಎಂದು ಯುಐಡಿಎಐ ಒಂಭತ್ತು ನ್ಯಾಯಾಧೀಶರನ್ನೊಳಗೊಂಡ ಪೀಠಕ್ಕೆ ಹೇಳಿದೆ.