ನವದೆಹಲಿ (ಸೆ.18): ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುಗಡೆ ಮಾಡುವುದು ಅಸಾಧ್ಯ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಈಗ ನಮ್ಮ ಬಳಿ ಇರುವುದು ಕೇವಲ 27 ಟಿಎಂಸಿ ನೀರು ಮಾತ್ರ,ಅದನ್ನು ಕುಡಿಯಲು ಮಾತ್ರ ಬಳಸಲು ಇಟ್ಟಿದ್ದೇವೆ, ಈ ವಿಷಯವನ್ನು ಕಾವೇರಿ ಮೇಲುಸ್ತುವಾರಿ ಸಮಿತಿಗೆ ಮನವರಿಕೆ ಮಾಡುತ್ತೇವೆ ಎಂದು ಅವರು ಸುವರ್ಣನ್ಯೂಸ್ಗೆ ತಿಳಿಸಿದ್ದಾರೆ.
ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಬಿಡುತ್ತಿದ್ದೇವೆ. ಮೊನ್ನೆಯವರೆಗೂ ಬೆಳೆಗಳಿಗೆ ನೀರು ಬಿಟ್ಟಿದ್ದೇವೆ, ಮತ್ತೆ ಮಳೆಯಾಗಿ ನೀರು ಸಂಗ್ರಹವಾದರೆ ನೀರು ಬಿಡಲು ಸಾಧ್ಯ ಎಂದು ಪಾಟೀಲ್ ಹೇಳಿದ್ದಾರೆ.
ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ನಾಳೆ ನಡೆಯುವ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಗಾಗಿ ದೆಹಲಿಗೆ ತೆರಳಿದ್ದಾರೆ.
