ಈ ಬಗ್ಗೆ ಮಾದಿಗ ರಕ್ಷಣಾ ಮಹಾ ಸಭಾವು ಕಳೆದ 15 ವರ್ಷಗಳಿಂದ ಒಳ ಮೀಸಲಾತಿ ವಿಚಾರವಾಗಿ ಹೋರಾಟ ಮಾಡುತ್ತಾ ಬಂದಿದೆ.
ಮೈಸೂರು (ಮೇ.03): ರಾಜ್ಯ ಸರ್ಕಾರ ಇನ್ನು 3 ತಿಂಗಳೊಳಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರದಿದ್ದರೆ ಬೆತ್ತಲೆಯಾಗಿ ವಿಧಾನಸೌಧ ಮುತ್ತಿಗೆ ಹಾಕುವ ಚಳುವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮಾದಿಗ ರಕ್ಷಣಾ ಮಹಾಸಭಾದ ರಾಜ್ಯಾಧ್ಯಕ್ಷ ಜೆ.ಸಿ.ಇತಿಹಾಸ್ ಎಚ್ಚರಿಸಿದರು.
ಹಲವಾರು ವರ್ಷಗಳಿಂದ ಪರಿಶಿಷ್ಟಜಾತಿಯಲ್ಲಿ ಆಗುತ್ತಿರುವ ಅನ್ಯಾಯ ವನ್ನು ತಡೆಯಲು ಸದಾಶಿವ ಆಯೋಗ ಉತ್ತಮ ವರದಿ ಸಲ್ಲಿಸಿದೆ. ಈ ಪ್ರಕಾರ ಮಾದಿಗ ಜನಾಂಗಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ದೊರಕ ಲಿದೆ. ಈ ಬಗ್ಗೆ ಮಾದಿಗ ರಕ್ಷಣಾ ಮಹಾ ಸಭಾವು ಕಳೆದ 15 ವರ್ಷಗಳಿಂದ ಒಳ ಮೀಸಲಾತಿ ವಿಚಾರವಾಗಿ ಹೋರಾಟ ಮಾಡುತ್ತಾ ಬಂದಿದೆ. ಆದರೆ ರಾಜ್ಯ ಸರ್ಕಾರವು ಈ ಬಗ್ಗೆ ಯಾವುದೇ ರೀತಿ ಯಾಗಿ ಸ್ಪಂದಿಸಿಲ್ಲ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಿನ ಹಾಲಿ ಸಿಎಂ ಸಿದ್ದ ರಾಮಯ್ಯ ಅವರು ಹಿಂದೆ ಚಿತ್ರದುರ್ಗ ದಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಭಾಗವಹಿಸಿ, ನ್ಯಾ. ಸದಾಶಿವ ಆಯೋಗ ವರದಿ ಜಾರಿಗೆ ತರುವುದಾಗಿ ವಾಗ್ದಾನ ನೀಡಿ ದ್ದರು. ಆದರೆ ಸಿಎಂ ಆದ ಮೇಲೆ ಮರೆತಂತೆ ಕಾಣುತ್ತದೆ ಅಥವಾ ಇತರೆ ದಲಿ ತರ ನಾಯಕರ ಮರ್ಜಿಗೆ ಒಳಗಾಗಿ ವರದಿ ಅನುಷ್ಠಾನಕ್ಕೆ ಮೀನಮೇಷ ಎಣಿಸುತ್ತಿದ್ದಾರೆ ಎಂದೆನಿಸುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ 4 ವರ್ಷಗಳು ಕಳೆದಿದ್ದರೂ ಒಳಮೀಸಲಾತಿ ಯನ್ನು ಜಾರಿಗೊಳಿಸಲು ವಿಫಲರಾಗಿ ದ್ದಾರೆ ಎಂದು ಇತಿಹಾಸ್ ಕಿಡಿಕಾರಿದರು. ಮಾದಿಗ ರಕ್ಷಣಾ ಮಹಾಸಭಾದ ಅಧ್ಯಕ್ಷ ಸಿ. ಮಹದೇವಯ್ಯ, ರಾಜ್ಯ ಹಿರಿಯ ಉಪಾಧ್ಯಕ್ಷ ಕಾಳಯ್ಯ, ಸಮಾಜ ಸೇವಕ ಈರಪ್ಪ, ವೆಂಕಟಾ ಚಲಯ್ಯ, ಎಸ್. ಮಂಜುನಾಥ್, ಸಾಹಿತಿ ಮ.ಸಿ.ನಾರಾಯಣ ಇದ್ದರು.
