ಹಲೋ ಮಿನಿಸ್ಟರ್, ಇದು ಸುವರ್ಣ ನ್ಯೂಸ್​ ಆರಂಭಿಸಿರುವ ವಿಭಿನ್ನ ಪ್ರಯತ್ನ. ಜನರ ಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಈ ಕಾರ್ಯಕ್ರಮದಲ್ಲಿ ಮೊದಲ ಯಶಸ್ಸು ಸಿಕ್ಕಿದೆ. ಸಚಿವರ ಡೆಡ್​'ಲೈನ್​ಗೂ ಮುನ್ನವೇ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದು, ಇದು ಪರಿಹಾರದ ಪತ್ರಿಕೋದ್ಯಮಕ್ಕೆ ಸಿಕ್ಕ ಮೊದಲ ಗೆಲುವು

ಬಾಗಲಕೋಟೆ(ಮಾ.01): ಹಲೋ ಮಿನಿಸ್ಟರ್, ಇದು ಸುವರ್ಣ ನ್ಯೂಸ್​ ಆರಂಭಿಸಿರುವ ವಿಭಿನ್ನ ಪ್ರಯತ್ನ. ಜನರ ಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಈ ಕಾರ್ಯಕ್ರಮದಲ್ಲಿ ಮೊದಲ ಯಶಸ್ಸು ಸಿಕ್ಕಿದೆ. ಸಚಿವರ ಡೆಡ್​'ಲೈನ್​ಗೂ ಮುನ್ನವೇ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದು, ಇದು ಪರಿಹಾರದ ಪತ್ರಿಕೋದ್ಯಮಕ್ಕೆ ಸಿಕ್ಕ ಮೊದಲ ಗೆಲುವು

ಹಲೋ ಮಿನಿಸ್ಟರ್ ಸಚಿವರು ಮತ್ತು ಜನರನ್ನು ಮುಖಾಮುಖಿಯಾಗಿಸಿ, ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ಹುಡುಕುವ ಸುವರ್ಣ ನ್ಯೂಸ್​ನ ವಿಭಿನ್ನ ಪ್ರಯತ್ನ. ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಗುಳೇದಗುಡ್ಡ ತಾಂಡಾ ಜನರ ಕುಡಿಯುವ ನೀರಿನ ವಿಚಾರ ಚರ್ಚೆಗೆ ಬಂದಿತ್ತು. ಗ್ರಾಮದ ರಾಜು ದೂರವಾಣಿ ಮೂಲಕ ಸಮಸ್ಯೆ ಬಿಚ್ಚಿಟ್ಟಾಗ ಸಮಸ್ಯೆ ಪರಿಹಾರಕ್ಕೆ ಸಚಿವರು ಡೆಡ್ಲೈನ್ ಕೊಟ್ಟಿದ್ದರು.

ಅಧಿಕಾರಿಗೆ ಸಚಿವರು ಒಂದು ವಾರದ ಡೆಡ್​ಲೈನ್ ಕೊಟ್ಟಿದ್ದರಾದರೂ ಎರಡನೇ ದಿನದಲ್ಲಿ ಅಧಿಕಾರಿಗಳು ಗುಳೇದಗುಡ್ಡ ತಾಂಡಾಗೆ ಭೇಟಿ ಕೊಟ್ಟಿದ್ದಾರೆ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದಾರೆ.

ಇಷ್ಟು ದಿನ ನೀರಿಗಾಗಿ ಪರದಾಡುತ್ತಿದ್ದ ತಾಂಡಾದ ಜನ, ಇದೀಗ ಸುವರ್ಣ ನ್ಯೂಸ್ ವರದಿಯಿಂದ ನೀರು ಸಿಕ್ಕುತ್ತಲೇ ಖುಷಿಯಾಗಿದ್ದಾರೆ. ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಇದು ಹಲೋ ಮಿನಿಸ್ಟರ್ ಕಾರ್ಯಕ್ರಮದ ಮೊದಲ ಇಂಪ್ಯಾಕ್ಟ್. ನಮ್ಮ ಕಾರ್ಯಕ್ರಮದ ಮೂಲ ಉದ್ದೇಶವೂ ಇದೇ ಆಗಿದ್ದು ಜನರ ಸಮಸ್ಯೆಗೆ ಪರಿಹಾರ ಸಿಗೋವರೆಗೂ ನಾವು ಬಿಡಲ್ಲ. ನೆನಪಿರಲಿ, ಹಲೋ ಮಿನಿಸ್ಟರ್ ಇದು ಪರಿಹಾರದ ಪತ್ರಿಕೋದ್ಯಮ.